ಸರ್ಕಾರಿ ಬಸ್​ – ಕಾರು ಮುಖಾಮುಖಿ ಡಿಕ್ಕಿ: 6 ಮಂದಿ ಸಾವು

Prasthutha|


ಚೆನ್ನೈ: ಸರ್ಕಾರಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ 6 ಮಂದಿ ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

- Advertisement -

ಸೋಮವಾರ ತಡರಾತ್ರಿ ತಿರುವಣ್ಣಾಮಲೈನ ಅಂಧನೂರ್ ಬೈಪಾಸ್ ಬಳಿ ಕಾರು ಮತ್ತು ಸರ್ಕಾರಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಆರು ಮಂದಿ ಸಾವನ್ನಪ್ಪಿದ್ದಾರೆ. 10 ಜನರಿದ್ದ ಟಾಟಾ ಸುಮೋ ತಿರುವಣ್ಣಾಮಲೈನಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಸೆಂಗಂ ಬಳಿ ಸರ್ಕಾರಿ ಬಸ್‌ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರನ್ನು ಚೇತರಿಸಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಸ್ಸಿನಲ್ಲಿದ್ದ ಸುಮಾರು 10 ಪ್ರಯಾಣಿಕರಿಗೂ ಗಾಯಗಳಾಗಿವೆ.

- Advertisement -

Join Whatsapp