ನಾವು ನಟಿ ಗೌತಮಿ ಪರ ಇದ್ದೇವೆ, ಯಾರ ರಕ್ಷಣೆಗೆ ಯಾರೂ ಯತ್ನಿಸುತ್ತಿಲ್ಲ: ಅಣ್ಣಾಮಲೈ

Prasthutha|

ಚೆನ್ನೈ: ಪಕ್ಷ ತೊರೆದಿರುವ ನಟಿ ಗೌತಮಿ ತಡಿಮಲ್ಲ ಅವರ ಪರವಾಗಿ ನಾವಿದ್ದೇವೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಹೇಳಿದ್ದಾರೆ. ಈ ಮೂಲಕ ಪಕ್ಷಕ್ಕೆ ಬಂದು 25 ವರ್ಷಗಳ ಬಳಿಕ ನಟಿ ಗೌತಮಿ ಬಿಜೆಪಿ ತೊರೆದ ಬಳಿಕ ನೀಡಿದ ಹೇಳಿಕೆಗೆ ಅಣ್ಣಾ ಮಲೈ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

ಚೆನ್ನೈನಲ್ಲಿ ಮಾತನಾಡಿದ ಅಣ್ಣಾಮಲೈ, ಪಕ್ಷವು ಅವರ ಪರವಾಗಿದೆ. ಗೌತಮಿ ಅವರಿಗೆ ಎಫ್ಐಆರ್ ದಾಖಲಿಸಲು ನಾವು ಬೆಂಬಲ ನೀಡಿದ್ದೆವು. ಆದರೆ ಈಗ ಕೆಲವು ಬಿಜೆಪಿ ಕಾರ್ಯಕರ್ತರು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಭಾವಿಸಿದ್ದಾರೆ. ಅವರು ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ಯಾರೂ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿಲ್ಲ ಮತ್ತು ಅವರು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿಲ್ಲ. ಈ ಬಗ್ಗೆ ನಾನು ಗೌತಮಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.