ಕಾಂಗ್ರೆಸ್ ಮುಖಂಡ ಹತ್ಯೆ ಪ್ರಕರಣ: ಆರೋಪಿಗಳ ಮೇಲೆ ಫೈರಿಂಗ್

Prasthutha|

- Advertisement -

ಕೋಲಾರ: ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳಾದ ವೇಣುಗೋಪಾಲ್, ಮನೀಂದ್ರ ಕಾಲಿಗೆ ವೇಮಗಲ್ ಠಾಣೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಲಕ್ಷ್ಮೀಸಾಗರ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಸಂತೋಷ್​ ಗೂ ಗಾಯವಾಗಿದೆ.

- Advertisement -

ಬಂಧಿಸಿ ಕರೆತರುವ ವೇಳೆ ಆರೋಪಿಗಳು ಪೊಲೀಸ್ ಸಿಬ್ಬಂದಿಯಾದ ಮಂಜುನಾಥ್ ಮತ್ತು ನಾಗೇಶ್​ ಮೇಲೆ ಹಲ್ಲೆ ಮಾಡಲು ಯತ್ನಿಸಿದರು. ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಇನ್ಸ್​ಪೆಕ್ಟರ್​ ವೆಂಕಟೇಶ್ ಫೈರಿಂಗ್ ಮಾಡಿದ್ದಾರೆ. ​ಗಾಯಗೊಂಡ ಪೊಲೀಸ್ ಸಿಬ್ಬಂದಿ, ಆರೋಪಿಗಳಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp