ಇಡೀ ಗುಜರಾತ್ ಕಾಂಗ್ರೆಸ್ ಅನ್ನು 25 ಕೋಟಿ ರೂ.ಗೆ ಖರೀದಿಸಬಹುದು | ಸಿಎಂ ವಿಜಯ್ ರುಪಾನಿ

Prasthutha|

ಅಹಮದಾಬಾದ್ : ಸಂಪೂರ್ಣ ಗುಜರಾತ್ ಕಾಂಗ್ರೆಸ್ ಅನ್ನು ಕೇವಲ 25 ಕೋಟಿ ರೂ.ಗೆ ಕೊಂಡುಕೊಳ್ಳಬಹುದು ಎಂದು ಅಲ್ಲಿನ ಸಿಎಂ ವಿಜಯ್ ರುಪಾನಿ ಹೇಳಿದ್ದಾರೆ. ಸುರೇಂದ್ರ ನಗರ ಸಮೀಪದ ಲಿಂಬಿಡಿಯಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದ್ದಾರೆ.

“ಇಂದು ಕಾಂಗ್ರೆಸ್ ಮಹಾತ್ಮ ಗಾಂಧಿಯವರ ಆದರ್ಶಗಳಿಂದ ದೂರವಿದೆ. ಇಂದಿನ ಕಾಂಗ್ರೆಸ್ ಮಹಾತ್ಮ ಗಾಂಧಿಯ ಕಾಂಗ್ರೆಸ್ ಆಗಿ ಉಳಿದಿಲ್ಲ, ಅದು ರಾಹುಲ್ ಗಾಂಧಿಯ ಕಾಂಗ್ರೆಸ್ ಆಗಿ ಮಾತ್ರ ಉಳಿದಿದೆ’’ ಎಂದು ರುಪಾನಿ ಹೇಳಿದ್ದಾರೆ.

- Advertisement -

ಬಿಜೆಪಿ ತನ್ನ ಶಾಸಕರನ್ನು 25 ಕೋಟಿ ರೂ.ಗೆ ಖರೀದಿಸಿ ಟಿಕೆಟ್ ನೀಡಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ರುಪಾನಿ, “ಕಾಂಗ್ರೆಸ್ ತನ್ನ ಶಾಸಕರನ್ನೇ ಗೌರವಿಸುವುದಿಲ್ಲ, ಅವರು ಪಕ್ಷ ಬಿಟ್ಟ ಬಳಿಕ ಇಂತಹ ಆರೋಪ ಮಾಡಲಾಗುತ್ತದೆ. ಇಡೀ ಗುಜರಾತ್ ಕಾಂಗ್ರೆಸ್ ಅನ್ನು 25 ಕೋಟಿ ರೂ.ಗೆ ಖರೀದಿಸಬಹುದು’’ ಎಂದು ಹೇಳಿದ್ದಾರೆ.

- Advertisement -