ಜಮ್ಮು-ಕಾಶ್ಮೀರ | ಫಾರೂಕ್ ಅಬ್ದುಲ್ಲಾಗೆ ಮೀಲಾದುನ್ನಬಿ ಪ್ರಾರ್ಥನೆಗೆ ತಡೆ | ಆಡಳಿತದ ವಿರುದ್ಧ ಆಕ್ರೋಶ

Prasthutha|

ಶ್ರೀನಗರ : ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಅವರನ್ನು ಇಂದು ಶ್ರೀನಗರದ ಹಝರತ್ ಬಲ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಜಮ್ಮು-ಕಾಶ್ಮೀರ ಆಡಳಿತ ತಡೆಯೊಡ್ಡಿರುವ ಘಟನೆ ನಡೆದಿದೆ. ಮೀಲಾದುನ್ನಬಿ ಹಿನ್ನೆಲೆಯಲ್ಲಿ ಹಜರತ್ ಬಲ್ ಮಸೀದಿಯಲ್ಲಿ ಮಾಜಿ ಸಿಎಂಗೆ ಅಡ್ಡಿ ಪಡಿಸಲಾಗಿರುವುದನ್ನು ನ್ಯಾಶನಲ್ ಕಾನ್ಫರೆನ್ಸ್ ಟ್ವೀಟ್ ಮಾಡಿ ತಿಳಿಸಿದೆ.

ಪ್ರಾರ್ಥನೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸಿರುವುದನ್ನು ಖಂಡಿಸುತ್ತೇವೆ ಎಂದು ನ್ಯಾಶನಲ್ ಕಾನ್ಫರೆನ್ಸ್ ತನ್ನ ಟ್ವೀಟ್ ಮಾಡಿದೆ. ಅದರಲ್ಲೂ ಮೀಲಾದುನ್ನಬಿ ಸಂದರ್ಭ ಈ ರೀತಿ ಮಾಡಿರುವುದಕ್ಕೆ ಅದು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

- Advertisement -

ಘಟನೆಯನ್ನು ಪಿಡಿಪಿ ಮುಖ್ಯಸ್ಥೆ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕೂಡ ಖಂಡಿಸಿದ್ದಾರೆ. ಇದು ತೀವ್ರ ಖಂಡನಾರ್ಹವಾದುದು ಮತ್ತು ನಮ್ಮ ಹಕ್ಕುಗಳ ಉಲ್ಲಂಘನೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.  

- Advertisement -