50 ಅಡಿ ಉದ್ದದ ಬೃಹತ್ ಅನಕೊಂಡ ನದಿ ದಾಟುತ್ತಿರುವ ವೀಡಿಯೊ ವೈರಲ್! | ಇದು ನಿಜವೇ? ನೀವೇ ನೋಡಿ…

Prasthutha|

ನವದೆಹಲಿ : ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬ್ರೆಜಿಲ್ ನ ನದಿಯೊಂದರಲ್ಲಿ ಹರಿದಾಡುತ್ತಿರುವ 50 ಅಡಿ ಉದ್ದದ ಬೃಹತ್ ಅನಕೊಂಡ ಎಂಬ ಸಂದೇಶದೊಂದಿಗೆ ವೀಡಿಯೊವೊಂದು ಹರಿದಾಡುತ್ತಿದೆ. ಇದು ನಿಜವೇ? ಎಂಬುದು ಈಗ ಹಲವರ ಪ್ರಶ್ನೆ

- Advertisement -

ಸಾಮಾನ್ಯವಾಗಿ ನೋಡುವವರಿಗೆ ಇದು ನಿಜವಿರಬಹುದು ಎಂದೆನಿಸುವುದು ಸಹಜ. ಈ ವೀಡಿಯೊ ಇದೇ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದಲ್ಲ. ಸಾಮಾಜಿಕ ಜಾಲತಾಣ ಲೋಕಕ್ಕೆ ಈ ವೀಡಿಯೊ 2018ರಲ್ಲೇ ಪ್ರವೇಶ ಕೊಟ್ಟಿದೆ. ಬ್ರೆಜಿಲ್ ನ ಕ್ಸಿಂಗು ನದಿಯಲ್ಲಿ ಈ ಅನಕೊಂಡ ಕಾಣಿಸಿದೆ ಎನ್ನಲಾಗುತ್ತಿದೆ.

ಆದರೆ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ‘ದಾಟ್ಸ್ ನಾನ್ಸೆನ್ಸ್’ ವೆಬ್ ಸೈಟ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ವೀಡಿಯೊ 2018ರಲ್ಲಿ ಇಂಟರ್ನೆಟ್ ಗೆ ಅಪ್ ಲೋಡ್ ಆಗಿದೆ. ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿರುವ ಈ ವೀಡಿಯೊದಲ್ಲಿ ಬೃಹತ್ ಆಕಾರದ ಹಾವು ರಸ್ತೆ ದಾಟುತ್ತಿರುವುದಾಗಿದೆ. ಆದರೆ, ಇದು 50 ಅಡಿಯ ಅನಕೊಂಡ ಅಲ್ಲ. ಮೂಲ ವೀಡಿಯೊವನ್ನು ತಿರುಚಿ ಈ ರೀತಿ ಮಾಡಲಾಗಿದೆ. ಹೀಗಾಗಿ ಇದೊಂದು ಸುಳ್ಳು ವೀಡಿಯೊ ಎಂಬುದು ಸಾಬೀತಾಗಿದೆ.

Join Whatsapp