ಗೃಹಲಕ್ಷ್ಮೀ ಯೋಜನೆ ಡಿಕೆ ಶಿವಕುಮಾರ್ ಕನಸಿನ ಯೋಜನೆ: ಲಕ್ಷ್ಮೀ ಹೆಬ್ಬಾಳ್ಕರ್

Prasthutha|

ಉಡುಪಿ: ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಆರಂಭವಾದ ಗೃಹಲಕ್ಷ್ಮೀ ಯೋಜನೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕನಸಿನ ಕೂಸು. ವಾರ್ಷಿಕವಾಗಿ 36000 ಕೋಟಿ ರೂ. ವ್ಯಚ್ಚವನ್ನು ಹೊಂದಿರುವ ಈ ಯೋಜನೆ, 1.9 ಕೋಟಿ ಫಲಾನುಭವಿಗಳಿಂದ ನೋಂದಣಿ ಪಡೆದ ಜನಪ್ರಿಯ ಯೋಜನೆಯಾಗಿದೆ ಎಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

- Advertisement -


ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾಷೆ, ಧರ್ಮ,ವ್ಯಾಪ್ತಿಯನ್ನು ಮೀರಿ ಈ ಯೋಜನೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಡಿತರ ಕಾರ್ಡ್ ತಿದ್ದುಪಡಿಗೆ ಸರ್ಕಾರ ಒಂದು ತಿಂಗಳ ಅವಕಾಶಗಳನ್ನು ನೀಡಿದ್ದು, ಕರಾವಳಿ ಮಹಿಳೆಯರ ಅಭಿವೃದ್ಧಿಗಾಗಿ ಈ ಯೋಜನೆಯು ಸಹಕಾರಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

Join Whatsapp