ಪ್ರಧಾನಿ ಮೋದಿ ಮುಂದಿನ ವರ್ಷ ಅವರ ಮನೆಯಲ್ಲಿ ಧ್ವಜಾರೋಹಣ ಮಾಡುತ್ತಾರೆ: ಮಲ್ಲಿಕಾರ್ಜುನ ಖರ್ಗೆ

Prasthutha|

ನವದೆಹಲಿ: ಮುಂದಿನ ವರ್ಷ ಇದೇ ಸ್ಥಳ, ಇದೇ ಸಮಯ ಕೆಂಪುಕೋಟೆಯಲ್ಲಿ ಮತ್ತೆ ಧ್ವಜಾರೋಹಣ ಮಾಡುತ್ತೇನೆಂಬ ಪ್ರಧಾನಿ ಮೋದಿಯವರ ಹೇಳಿಕೆ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವ್ಯಂಗ್ಯವಾಡಿದ್ದಾರೆ.

- Advertisement -

ಮೋದಿಯವರು ಮುಂದಿನ ವರ್ಷ ಧ್ವಜಾರೋಹಣ ಮಾಡುತ್ತಾರೆ. ಆದರೆ, ಅದು ಅವರ ಮನೆಯಲ್ಲಿ. ಮುಂದಿನ ವರ್ಷ ಆಗಸ್ಟ್ 15 ರಂದು ಕೆಂಪುಕೋಟೆಯಲ್ಲಿ ದೇಶದ ಸಾಧನೆಯ ಕುರಿತು ನಾನು ಮಾತನಾಡುತ್ತೇನೆಂದು ಹೇಳಿದರು.

77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಕಾಂಗ್ರೆಸ್ ಪಕ್ಷ ಪ್ರಧಾನ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಇಂದು ಧ್ವಜಾರೋಹಣ ಮಾಡಿದರು.

- Advertisement -


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆದ್ದ ಬಳಿಕ ಮುಂದೆಯೂ ನಾನೇ ಅಧಿಕಾರದಲ್ಲಿರುತ್ತೇನೆಂದು ಪ್ರತಿಯೊಬ್ಬ ವ್ಯಕ್ತಿಯೂ ಹೇಳುತ್ತಾರೆ. ಆದರೆ, ಗೆಲುವು, ಸೋಲು ಎಂಬುದು ಜನರ ಮತ್ತು ಮತದಾರರ ಕೈಯಲ್ಲಿಸುತ್ತದೆ. 2024ರಲ್ಲಿಯೂ ನಾನೇ ಧ್ವಜಾರೋಹಣ ಮಾಡುತ್ತೇನೆಂದು ಹೇಳುವುದು ಅಹಂಕಾರದ ಪರಮಾವಧಿ. ಸ್ವಾತಂತ್ರ್ಯ ದಿನಾಚರಣೆಯ ದಿನವೂ ವಿಪಕ್ಷಗಳ ವಿರುದ್ಧ ಹೇಳಿಕೆ ನೀಡಿದರೆ. ದೇಶವನ್ನು ಹೇಗೆ ಕಟ್ಟುತ್ತಾರೆಂದು ಪ್ರಶ್ನಿಸಿದರು.

Join Whatsapp