ಅಕ್ಷಯ್ ಕುಮಾರ್’ಗೆ ಭಾರತದ ಪೌರತ್ವ

Prasthutha|

ಮುಂಬೈ: ಕೆನೆಡಾ ಪ್ರಜೆಯಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ವವನ್ನು ಪಡೆದಿದ್ದಾರೆ.

- Advertisement -


ಸ್ವಾತಂತ್ರ್ಯೋತ್ಸವ ದಿನದಂದು ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ’ಈಗ ಹೃದಯ ಹಾಗೂ ಪೌರತ್ವ ಎರಡೂ ಹಿಂದೂಸ್ಥಾನಿ. ಸ್ವಾತಂತ್ರ್ಯೋತ್ಸವದ ಶುಭಾಶಯಗಳು! ಜೈ ಹಿಂದ್’ ಎಂದು ಬರೆದುಕೊಂಡಿದ್ದಾರೆ.


1990ರಲ್ಲಿ ಸತತ 15 ಚಿತ್ರಗಳ ಸೋಲಿನ ನಂತರ ಕೆನಡಾ ದೇಶದ ಪೌರತ್ವ ಪಡೆಯುವುದು ಅವರಿಗೆ ಅನಿವಾರ್ಯವಾಗಿತ್ತಂತೆ. ಅದು ತಮ್ಮ ಬದುಕಿನ ಅತ್ಯಂತ ಕಠಿಣ ಪರಿಸ್ಥಿತಿ ಎಂದು ಈ ಹಿಂದೆ ಅಕ್ಷಯ್ ಹೇಳಿದ್ದರು.

Join Whatsapp