ಆಗಸ್ಟ್ 5 ರಂದು ಗೃಹಜ್ಯೋತಿ ಲಾಂಚ್: ಕೆಜೆ ಜಾರ್ಜ್

Prasthutha|

ಬೆಂಗಳೂರು: ಆಗಸ್ಟ್ 5ರಂದು ಬೆಳಗ್ಗೆ 11 ಗಂಟೆಗೆ ಗೃಹಜ್ಯೋತಿ ಯೋಜನೆ ಲಾಂಚ್ ಕಾರ್ಯಕ್ರಮ ನಿಗದಿಯಾಗಿದ್ದು, ಈ ಕಾರ್ಯಕ್ರಮ ಕಲಬುರಗಿಯಲ್ಲಿ ನಡೆಯಲಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.

- Advertisement -


ಗೃಹಜ್ಯೋತಿ ಲಾಂಚ್ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಯೋಜನೆ ಬಗ್ಗೆ ಮಾಧ್ಯಮ ಹೆಚ್ಚಾಗಿಯೇ ತಿಳಿಸಿದೆ. ನಾವು ವಿರೋಧ ಪಕ್ಷದಲ್ಲಿ ಇದ್ದಾಗಲೇ ಈ ಗ್ಯಾರಂಟಿಗಳನ್ನು ಪ್ಲಾನ್ ಮಾಡಿದ್ದು, ಸಿದ್ದರಾಮಯ್ಯ, ಡಿಕೆಶಿಯವರ ಸಹಿಯಿರುವ ಗ್ಯಾರಂಟಿ ಕಾರ್ಡ್ಗಳನ್ನು ವಿತರಣೆ ಮಾಡಿದ್ದೆವು. ಅವಶ್ಯಕ ವಸ್ತುಗಳ ಬೆಲೆ ಜನರನ್ನು ಕಾಡಿದ್ದರಿಂದ ಜನರಿಗೆ ಈ ಗ್ಯಾರಂಟಿಗಳನ್ನು ನೀಡಬೇಕು ಎಂದು ಯೋಚನೆ ಮಾಡಿದ್ದೆವು ಎಂದರು.


ಸಿಎಂ ಸಿದ್ದರಾಮಯ್ಯ 12 ತಿಂಗಳ ಸರಾಸರಿ ತೆಗೆದುಕೊಳ್ಳಲು ಹೇಳಿದ್ದಾರೆ. ಜುಲೈ ತಿಂಗಳ ಗೃಹಜ್ಯೋತಿ ಬಿಲ್ ಕೊಡಲು ಶುರು ಮಾಡಿದ್ದೇವೆ. 1.43 ಕೋಟಿ ಗೃಹಜ್ಯೋತಿ ನೋಂದಣಿಯಾಗಿದೆ. ಆಗಸ್ಟ್ 5ರಂದು ಲಾಂಚ್ ಕಾರ್ಯಕ್ರಮ ನಡೆಯುತ್ತೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಕಲಬುರಗಿ ಜಿಲ್ಲಾ ಸಚಿವ ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ಗೃಹಜ್ಯೋತಿ ಲಾಂಚ್ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

Join Whatsapp