ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳಿಗೆ ನಟ ಶಿವರಾಜ್ ಕುಮಾರ್ ರಾಯಭಾರಿ

Prasthutha|

ಕರ್ನಾಟಕದ ಹೆಮ್ಮೆಯ ಪ್ರತೀಕ ನಂದಿನಿ ಹಾಲು ಉತ್ಪನ್ನಗಳಿಗೆ ರಾಯಭಾರಿಯಾಗಿ ಸ್ಯಾಂಡಲ್ ವುಡ್ ನ ಹೆಸರಾಂತ ನಟ ಶಿವರಾಜ್ ಕುಮಾರ್ ಆಯ್ಕೆಯಾಗಿದ್ದಾರೆ. ಇಂದು ಶಿವರಾಜ್ ಕುಮಾರ್ ಜೊತೆ ಕೆಎಂಎಫ್ ಅಧಿಕಾರಿಗಳು ಮಾತುಕತೆ ನಡೆಸಿ, ಶಿವರಾಜ್ ಕುಮಾರ್ ಅವರನ್ನು ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸೇರಿದಂತೆ ಹಲವರು ಹಾಜರಿದ್ದರು.

- Advertisement -


ಕೆಎಂಎಫ್ (KMF) ಗೂ ಡಾ.ರಾಜ್ ಕುಟುಂಬಕ್ಕೂ ಹತ್ತಿರದ ನಂಟಿದೆ. 1996ರಲ್ಲಿ ಡಾ.ರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ ಒಪ್ಪಿಕೊಂಡರು. ಉಚಿತವಾಗಿಯೇ ಅದನ್ನು ಮಾಡಿಕೊಂಡು ಬಂದರು. ಡಾ.ರಾಜ್ ಕುಮಾರ್ ಕಾಣಿಸಿಕೊಂಡ ಏಕೈಕ ಜಾಹೀರಾತು ಅದಾಗಿತ್ತು. ಡಾ.ರಾಜ್ ಕುಮಾರ್ ಮರಣಾನಂತರ ಆ ಜವಾಬ್ದಾರಿಯನ್ನು ಪುನೀತ್ ರಾಜ್ ಕುಮಾರ್ ಮುಂದುವರೆಸಿಕೊಂಡು ಹೋಗುತ್ತಿದ್ದರು.
ಪುನೀತ್ ನಿಧನಾನಂತರ ಮತ್ತೆ ಡಾ.ರಾಜ್ ಕುಟುಂಬಕ್ಕೆ ಆ ಸೇವೆ ಹುಡುಕಿಕೊಂಡು ಹೋಗಿದೆ.

Join Whatsapp