ಪೋಲಿಸರ ಬಳಿಕ ಈಗ ಪತ್ರಕರ್ತರ ಮೇಲೆ ಗೂಂಡಾಗಿರಿ, ಸರ್ಕಾರ ರಚಿಸಿದ ಆ್ಯಂಟಿ ಕಮ್ಯುನಲ್ ವಿಂಗ್ ಕೇವಲ ಹೆಸರಿಗೆ ಮಾತ್ರ ಇದೆ: ರಿಯಾಝ್ ಕಡಂಬು

Prasthutha|

ಬೆಂಗಳೂರು: ಕಳೆದ ವಾರ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಅವರ ಕುಟುಂಬದ ಮಹಿಳೆಯರ ಮಾನಭಂಗಕ್ಕೆ ಪ್ರಯತ್ನಿಸುವ ಮೂಲಕ ತನ್ನ ಗೂಂಡಾಗಿರಿಯ ವಿಸ್ತಾರವನ್ನು ಪ್ರದರ್ಶಿಸಿದ್ದ ಸಂಘಪರಿವಾರದ ಅನೈತಿಕ ಪೊಲೀಸ್’ಗಿರಿ ಪಡೆ ಈಗ ಅಂತಹದ್ದೇ ದೌರ್ಜನ್ಯವನ್ನು ಪತ್ರಕರ್ತರ ವಿರುದ್ಧ ಪ್ರದರ್ಶಿಸಿದೆ. ಮಂಗಳೂರಿನ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಪತ್ರಕರ್ತ ಅಭಿಜಿತ್ ರನ್ನು ಅವಾಚ್ಯವಾಗಿ ನಿಂದಿಸಿದೆ. ಈ ದೌರ್ಜನ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯ ಮಾಧ್ಯಮ ಉಸ್ತುವಾರಿ ರಿಯಾಝ್ ಕಡಂಬು ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

- Advertisement -

ಕೋಮುವಾದಿ ಬಿಜೆಪಿ ಆಡಳಿತದಲ್ಲಿ ಸಂಘಪರಿವಾರದ ನೀಚ ಅನೈತಿಕ ಪೋಲಿಸ್’ಗಿರಿ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದ್ದವು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ತಾನು ಆಡಳಿತಕ್ಕೆ ಬಂದರೆ ಇಂತ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕುತ್ತೇವೆ ಎಂದು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದೆ. ನಂತರ ರಾಜ್ಯ ಸರ್ಕಾರ ಈ ರೀತಿಯ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಆಂಟಿ ಕಮ್ಯುನಲ್ ವಿಂಗ್ ಅನ್ನು ಕೂಡ ರಚಿಸಿದೆ. ಆದರೆ ಅದರ ಪರಿಣಾಮ ಮಾತ್ರ ಈವರೆಗೂ ಶೂನ್ಯವೆ ಆಗಿದೆ. ಇಂದು ಖಾಸಗಿ ವಾಹಿನಿಯ ವರದಿಗಾರರಾದ ಅಭಿಜಿತ್ ಅವರ ಮೇಲೆ ಗೂಂಡಾಗಿರಿ ನಡೆಸಿರುವ ಚೇತನ್ ಮತ್ತು ನವೀನ್ ಎಂಬ ಸಂಘಿ ಗೂಂಡಾಗಳ ವಿರುದ್ಧ ಪೋಲಿಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಿಯಾಝ್ ಕಡಂಬು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳಲ್ಲಿ ಯಾವುದೇ ಇಳಿಕೆಯಾಗಿಲ್ಲ. ಮುರುಡೇಶ್ವರ ಬೀಚ್ ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ, ಬೆಂಗಳೂರಿನಲ್ಲಿ ಬಿಎಂಟಿಸಿಯ ಮುಸ್ಲಿಂ ನಿರ್ವಾಹಕರ ಟೋಪಿಯನ್ನು ಬಲವಂತವಾಗಿ ತೆಗೆಸಿದ್ದು ಸೇರಿದಂತೆ ಸಂಘಪರಿವಾರದ ಪುಂಡಾಟ ಮೊದಲಿನಂತೆಯೇ ಮುಂದುವರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರು ಈ ಕುರಿತು ಮತ್ತಷ್ಟು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಿಯಾಝ್ ಕಡಂಬು ಹೇಳಿದ್ದಾರೆ.

Join Whatsapp