ಮಂಗಳೂರಿಗೆ ಆಗಮಿಸಿದ ರಾಜ್ಯಪಾಲ ಗೆಹ್ಲೋಟ್

Prasthutha|

ಮಂಗಳೂರು:  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಸೋಮಾವಾರ ಬೆಳಿಗ್ಗೆ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

- Advertisement -

ಈ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಸ್ವಾಗತಿಸಲಾಯಿತು.

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ. ಕುಮಾರ್, ಪೋಲಿಸ್ ಆಯುಕ್ತ ಶಶಿಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -

  ವಿಮಾನ ನಿಲ್ದಾಣದಿಂದ 11.30ಕ್ಕೆ ಸಕ್ಯೂಟ್ ಹೌಸ್ಗೆ ಆಗಮಿಸಿ ಲಘು ವಾಸ್ತವ್ಯ ಮಾಡಿದ ಅವರು, 11.45ಕ್ಕೆ ಸಕ್ಯೂಟ್ ಹೌಸ್ ನಿಂದ ಹೊರಟು 11.55ಕ್ಕೆ ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು.

 ಮಧ್ಯಾಹ್ನ 12.15ಕ್ಕೆ ಅಲ್ಲಿಂದ ನಿರ್ಗಮಿಸಿ, 12.25 ಸರ್ಕ್ಯೂಟ್ ಹೌಸ್ಗೆ ಆಗಮಿಸಿ ಭೋಜನ ಸೇವಿಸಿ, ಲಘುವಾಸ್ತವ್ಯ ಮಾಡುವರು.

 ಮಧ್ಯಾಹ್ನ 2.45ಕ್ಕೆ ಸರ್ಕ್ಯೂಟ್ ಹೌಸ್ನಿಂದ ಹೊರಟು 3.45ಕ್ಕೆ ಮೂಡಬಿದರೆಯ ಸಾವಿರ ಕಂಬದ ಬಸದಿಗೆ ಭೇಟಿ ನೀಡುವರು. ಸಂಜೆ 4 ಗಂಟೆಗೆ ಅಲ್ಲಿಂದ ಹೊರಟು 4.10ಕ್ಕೆ ಕೊಡಿಯಡ್ಕದ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಆಗಮಿಸುವರು. ಸಂಜೆ 4.25ಕ್ಕೆ ಅಲ್ಲಿಂದ ಹೊರಟು, 4.55ಕ್ಕೆ ಕಾರ್ಕಳದ ಅತಿಥಿ ಗೃಹಕ್ಕೆ ಆಗಮಿಸಿ ಲಘುವಾಸ್ತವ್ಯ ಮಾಡುವರು.

 ಸಂಜೆ 7.10ಕ್ಕೆ ಕಾರ್ಕಳದಿಂದ ಹೊರಟು 8.40ಕ್ಕೆ ಮಂಗಳೂರಿನ ಸರ್ಕ್ಯೂಟ್ ಹೌಸ್ಗೆ ಬಂದು ವಾಸ್ತವ್ಯ ಮಾಡುವರು.

 ಮಾ.15ರ ಮಂಗಳವಾರ ಬೆಳಿಗ್ಗೆ 8.15ಕ್ಕೆ ಸರ್ಕ್ಯೂಟ್ ಹೌಸ್ನಿಂದ ಹೊರಟು 8.45ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಬೆಳಿಗ್ಗೆ 9 ಗಂಟೆಗೆ ವಿಮಾನದ ಮೂಲಕ ಹೊರಟು 9.55ಕ್ಕೆ ಬೆಂಗಳೂರು ತಲುಪುವರು ಎಂದು ರಾಜ್ಯಪಾಲರ ಎಡಿಸಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp