ಚಾಲಕನ ದುಸ್ಸಾಹಸಕ್ಕೆ ಕೊಚ್ಚಿ ಹೋದ ಗೂಡ್ಸ್ ವಾಹನ

Prasthutha|

ಮಂಡ್ಯ: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗೂಡ್ಸ್ ವಾಹನ ಕೊಚ್ಚಿ ಹೋದ ಘಟನೆ ನಾಗಮಂಗಲ ತಾಲೂಕಿನ ಅಣೆಚನ್ನಾಪುರ ಬಳಿ ನಡೆದಿದೆ.

- Advertisement -


ಭಾರೀ ಮಳೆಯ ಪರಿಣಾಮ ಅಣೆಚನ್ನಾಪುರ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧ ಮಾಡಲಾಗಿತ್ತು. ಇದನ್ನು ಲೆಕ್ಕಿಸದ ಚಾಲಕನೋರ್ವ ಸೇತುವೆ ಮೇಲೆ ಸಂಚರಿಸಿದ್ದಾನೆ. ಆತ ನೀರಿನ ರಭಸಕ್ಕೆ ವಾಹನದ ಸಮೇತ ಕೊಚ್ಚಿ ಹೋಗಿದ್ದಾನೆ. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.


ನಿರ್ಬಂಧ ಹೇರಿದ್ದರೂ ದುಸ್ಸಾಹಸಕ್ಕೆ ಮುಂದಾಗುತ್ತಿರುವವರ ವಿರುದ್ಥ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp