ಸಂಸತ್ ಅಧಿವೇಶನ ಸಮಯದಲ್ಲಿ ಬಂಧನಕ್ಕೊಳಗಾಗದಂತೆ ಸಂಸದರಿಗೆ ವಿನಾಯಿತಿ ಇಲ್ಲ: ಎಂ. ವೆಂಕಯ್ಯ ನಾಯ್ಡು

Prasthutha|

ನವದೆಹಲಿ: ಸಂಸತ್ ಅಧಿವೇಶನದಲ್ಲಿ ಅಥವಾ ಇನ್ನಾವುದೇ ರೀತಿಯಲ್ಲಿ ಕ್ರಿಮಿನಲ್ ಪ್ರಕರಣದಲ್ಲಿ ಬಂಧನಕ್ಕೊಳಗಾಗುವುದರಿಂದ ಸಂಸದರಿಗೆ ಯಾವುದೇ ವಿನಾಯಿತಿ ಇಲ್ಲ ಎಂದು ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಶುಕ್ರವಾರ ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ.

- Advertisement -

ಕ್ರಿಮಿನಲ್ ವಿಷಯಗಳಲ್ಲಿ ಸಂಸದರು “ಸಾಮಾನ್ಯ ನಾಗರಿಕರಿಗಿಂತ ವಿಭಿನ್ನ ನೆಲೆಗಟ್ಟಿನಲ್ಲಿಲ್ಲ.  ಸಂಸತ್ ಸದಸ್ಯರು ಅಧಿವೇಶನದ ಸಮಯದಲ್ಲಿ ಅಥವಾ ಇನ್ನಾವುದೇ ಸಮಯದಲ್ಲಿ ಕ್ರಿಮಿನಲ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಬಹುದು. ಅವರು ಯಾವುದೇ ವಿನಾಯಿತಿಯನ್ನು ಪಡೆಯುವುದಿಲ್ಲ ಎಂದು ನಾಯ್ಡು ಹೇಳಿದರು.

ಅಧಿವೇಶನ ನಡೆಯುತ್ತಿರುವಾಗ ಜಾರಿ ನಿರ್ದೇಶನಾಲಯವು ತಮ್ಮನ್ನು ಕರೆಸಿಕೊಂಡಿದೆ ಎಂದು ಕಾಂಗ್ರೆಸ್ ಸದನದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು  ವಿಷಯ ಪ್ರಸ್ತಾಪಿಸಿದ ಒಂದು ದಿನದ ನಂತರ ನಾಯ್ಡು ಅವರ ಈ ಅಭಿಪ್ರಾಯ ಬಂದಿದೆ.

Join Whatsapp