ಕಳ್ಳ ಭಟ್ಟಿ ಸಾರಾಯಿ ಕುಡಿದು ಕಣ್ಣಿನ ದೃಷ್ಟಿ ಕಳೆದುಕೊಂಡ 25ಕ್ಕೂ ಅಧಿಕ ಜನ

Prasthutha|

ಸರನ್ (ಬಿಹಾರ): ಕಳ್ಳ ಭಟ್ಟಿ ಸಾರಾಯಿ ಕುಡಿದು  ಏಳು ಮಂದಿ ಮೃತಪಟ್ಟಿದ್ಧಾರೆ. ಅಲ್ಲದೆ, 25ಕ್ಕೂ ಅಧಿಕ ಮಂದಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯೂ ಹೊರಬರುತ್ತಿದೆ.

- Advertisement -

ಈ ಹಿಂದೆ ಕೂಡ ಬಿಹಾರದ ಹಲವೆಡೆ ಕಳ್ಳಭಟ್ಟಿ ಕುಡಿದು ಅಸ್ವಸ್ಥರಾದ, ಪ್ರಾಣ ಕಳಕೊಂಡ  ದುರ್ಘಟನೆಗಳು ನಡೆದಿದ್ದರೂ  ಕಡಿಮೆ ದರದಲ್ಲಿ ಸಾರಾಯಿ ಸಿಗುತ್ತದೆ ಎಂಬ ಕಾರಣಕ್ಕೆ ಜನ ಅದನ್ನೇ ಖರೀದಿಸಿ ಕುಡಿಯುತ್ತಿದ್ದಾರೆ.

ಕೆಲ ದಿನಗಳಿಂದ ಇದರ ಹಾವಳಿ ಹೆಚ್ಚಾಗಿದ್ದು, ಸೇವನೆ ಮಾಡಿದ ಹಲವರು ಅಸ್ವಸ್ಥರಾಗಿದ್ದಾರೆ. ವಾಂತಿ ಮತ್ತು ತಲೆ ತಿರುಗುವಿಕೆ ಹೆಚ್ಚಾದ ಹಿನ್ನೆಲೆ ಕೆಲವರನ್ನು ಪಾಟ್ನಾದ ಪಿಎಂಸಿಎಚ್ ಗೆ ಕಳುಹಿಸಲಾಗಿದೆ.

- Advertisement -

ಫುಲ್ವಾರಿಯಾ ಗ್ರಾಮಕ್ಕೆ ವೈದ್ಯಕೀಯ ತಂಡವನ್ನು ಕಳುಹಿಸಿ ತಪಾಸಣೆ ಮಾಡಿಸಲಾಗಿದೆ. ತನಿಖಾ ವರದಿಯ ಪ್ರಕಾರ ಅಸ್ವಸ್ಥರಲ್ಲಿ ಮೆಥನಾಲ್ ವಿಷ ಇರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಈ ವಿಚಾರದಲ್ಲಿ ಅಧಿಕೃತ ಹೇಳಿಕೆ ಇನ್ನಷ್ಟೇ ಬರಬೇಕಿದೆ .ಇದುವರೆಗೆ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರನ್ ಜಿಲ್ಲಾಧಿಕಾರಿ ರಾಜೇಶ್ ಮೀನಾ ತಿಳಿಸಿದ್ದಾರೆ.

Join Whatsapp