ಏರ್ ಇಂಡಿಯಾ ಮಾರಾಟಕ್ಕೆ ಅಂತಿಮ ಬಿಡ್ ಕರೆದ ಕೇಂದ್ರ ಸರ್ಕಾರ: ಟಾಟಾ ಸಮೂಹ, ಸ್ಪೈಸ್ ಜೆಟ್ ಮುಂಚೂಣಿ

Prasthutha|

ನವದೆಹಲಿ: ಸರ್ಕಾರಿ ಒಡೆತನದ ಏರ್ ಇಂಡಿಯಾ ವಿಮಾನಗಳ ಷೇರು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇಂದು ಹಣಕಾಸು ಬಿಡ್ ಕರೆದಿದೆ.

- Advertisement -

ಟಾಟಾ ಗ್ರೂಪ್ ಮತ್ತು ಸ್ಪೈಸ್ ಜೆಟ್ ಸಂಸ್ಥೆ ಈ ಬಿಡ್ ನಲ್ಲಿ ಮುಂಚೂಣಿಯಾಗಿ ಭಾಗಿಯಾಗುವ ಸಾಧ್ಯತೆ ಇದೆ.


ವಿಮಾನಯಾನ ಸಂಸ್ಥೆಯ ಸಾಲವು 43 ಸಾವಿರ ಕೋಟಿ ರೂಪಾಯಿ ಮೀರಿದೆ. ಜೊತೆಗೆ ಎಲ್ಲಾ ಸಾಲವು ಸರ್ಕಾರಿ ಆಸ್ತಿಯ ಖಾತರಿಯಲ್ಲಿವೆ. ವಿಮಾನ ಸಂಸ್ಥೆಯನ್ನು ಬೇರೆ ಮಾಲೀಕರಿಗೆ ವರ್ಗಾಯಿಸುವ ಮೊದಲು ಈ ಎಲ್ಲಾ ಸಾಲಗಳನ್ನು ಭರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

- Advertisement -


ಸೆ.15ರೊಳಗೆ ಹಣಕಾಸು ಬಿಡ್ ಕರೆಯಲು ಕೇಂದ್ರ ಸಮ್ಮತಿಸಿತ್ತು. ವಿಮಾನಯಾನ ಮತ್ತು ಅದರ ಅಂಗ ಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್ಪ್ರೆಸ್ ನಲ್ಲಿ ಶೇ.100ರಷ್ಟು ಪಾಲನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Join Whatsapp