ತುಮಕೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ತುಮಕೂರಿನ ಮಧುಗಿರಿ ಎಂಬಲ್ಲಿ ಗಾಂಧಿ ಹಂತಕ, ಭಾರತದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಫೋಟೋ ಇರುವ ಫ್ಲೆಕ್ಸ್ ಹಾಕಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ತುಮಕೂರು ಜಿಲ್ಲೆಯ ಮಧುಗಿರಿಯ ದಂಡಿನಮಾರಮ್ಮ ದೇವಾಲಯ ಬಳಿ ಪುಂಡರು ಗೋಡ್ಸೆ ಪೋಟೋ ಹಾಕಿ ವಿಕೃತಿ ಮೆರೆದಿದ್ದು, ಪ್ರಸ್ತುತ ಇದು ವಿವಾದಕ್ಕೆ ಕಾರಣವಾಗಿದೆ.
ಅಲ್ಲದೆ, ಫ್ಲೆಕ್ಸ್ ನಲ್ಲಿ ಮೇಲೆ ಗೋಡ್ಸೆ ಪೋಟೋ ಹಾಕಿ, ಕೆಳಗೆ ಗಾಂಧೀಜಿ ಪೋಟೋ ಹಾಕಿದ್ದು ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ.
ಈ ಫ್ಲೆಕ್ಸ್ ಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ಹಿನ್ನೆಲೆ ಪೊಲೀಸರು ಕೂಡಲೇ ಫ್ಲೆಕ್ಸ್ ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.