‘ಮದ್ಯದಂಗಡಿ ಮುಚ್ಚುವವರೆಗೆ ಹುಡುಗಿಯರನ್ನು ಶಾಲೆಗೆ ಕಳುಹಿಸುವುದಿಲ್ಲ’: ವಿನೂತನ ಅಭಿಯಾನ ನಡೆಸಿದ ಗ್ರಾಮಸ್ಥರು!

Prasthutha|

ಶಿವಮೊಗ್ಗ: ಗ್ರಾಮದಲ್ಲಿನ ಮದ್ಯದಂಗಡಿಯನ್ನು ಮುಚ್ಚುವವರೆಗೆ ಹುಡುಗಿಯರನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳ್ಳಿಕೊಪ್ಪ ಗ್ರಾಮಸ್ಥರು ಅಭಿಯಾನ ಆರಂಭಿಸಿದ್ದಾರೆ.

ಈ ಹಿಂದೆಯೂ ಗ್ರಾಮದಲ್ಲಿನ ಮದ್ಯದ ಅಂಗಡಿಯ ವಿರುದ್ಧ ಪ್ರತಿಭಟನೆ ನಡೆಸಿದ್ದ ಬೆಳ್ಳಿಕೊಪ್ಪ ಗ್ರಾಮಸ್ಥರು ಇದೀಗ ಮತ್ತೊಂದು ಅಭಿಯಾನ ಆರಂಭಿಸಿದ್ದು, ಮದ್ಯದ ಅಂಗಡಿ ಬಂದ್ ಮಾಡದ ಹೊರತು ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೋರಾಟ ನಡೆಸುತ್ತಿದ್ದಾರೆ.

- Advertisement -

ಕಳೆದ ಡಿಸೆಂಬರ್ ನಲ್ಲಿ ಮದ್ಯದಂಗಡಿ ವಿರೋಧಿಸಿ ಚುನಾವಣೆ ಬಹಿಷ್ಕಾರ ಮಾಡಿದ್ದರು. ಈ ವೇಳೆ ಅಧಿಕಾರಿಗಳು ಮದ್ಯದಂಗಡಿ ಬಂದ್ ಮಾಡಿ, ಮತದಾನ ಮಾಡುವಂತೆ ಮನವೊಲಿಸಿದ್ದರು. ಗ್ರಾಮದಲ್ಲಿ ಇದೀಗ ಎಂಎಸ್‌ಐಎಲ್ ಮಳಿಗೆ ಆರಂಭಿಸಿರುವ ಹಿನ್ನೆಲೆಯಲ್ಲಿ ಬೆಳ್ಳಿಕೊಪ್ಪ ಗ್ರಾಮಸ್ಥರು ವಿನೂತನ ಪ್ರತಿಬಟನೆ ನಡೆಸಿದ್ದಾರೆ. ಮದ್ಯದಂಗಡಿ ಬಂದ್ ಮಾಡದಿದ್ದರೆ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

- Advertisement -