ಬಿಜೆಪಿಯು ಯೋಜನೆ, ಯೋಚನೆ ಇಲ್ಲದ ಗಾಂಪರ ಗುಂಪು: ಕಾಂಗ್ರೆಸ್ ಟೀಕೆ

Prasthutha|

ಬೆಂಗಳೂರು: ಬಿಜೆಪಿಯು ಯೋಜನೆ ಹಾಗೂ ಯೋಚನೆ ಇಲ್ಲದ ಗಾಂಪರ ಗುಂಪು ಎಂಬುದು ಸ್ಪಷ್ಟ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಉದ್ಯೋಗ ಸೃಷ್ಟಿಗೆ ಕ್ರಮ ವಹಿಸದೆ ಕೇವಲ ಕೌಶಲ್ಯ ತರಬೇತಿ ನೀಡಿ ಕೌಶಲ್ಯಯುತ ನಿರುದ್ಯೋಗಿಗಳನ್ನು ಸೃಷ್ಟಿಸುವಿರಾ ಅಶ್ವತ್ಥನಾರಾಯಣ ಅವರೇ ಎಂದು ಪ್ರಶ್ನೆ ಮಾಡಿದ್ದು, ಉದ್ಯೋಗ ಸೃಷ್ಟಿಯಲ್ಲಿ ರಾಜ್ಯ ಹಿಂದುಳಿದಿದ್ದರೂ ಕ್ರಮವಹಿಸದೆ ಯುವ ಸಮುದಾಯದ ಬದುಕನ್ನು ಕತ್ತಲೆಗೆ ತಳ್ಳಲಾಗುತ್ತಿದೆ ಎಂದು ಹೇಳಿದೆ.

- Advertisement -