ನಿಲ್ಲದ ಉತ್ತರ ಪ್ರದೇಶ ಕ್ರಿಮಿನಲ್ ಗಳ ಅಟ್ಟಹಾಸ | ಬಾಲಕಿಯ ಅತ್ಯಾಚಾರ, ಕೊಲೆ, ಲಿವರ್ ಕಿತ್ತು ತೆಗೆದ ಧೂರ್ತರು

Prasthutha: November 17, 2020

ಕಾನ್ಪುರ : ಉತ್ತರ ಪ್ರದೇಶದ ಅಪರಾಧಿಗಳ ಅಟ್ಟಹಾಸ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಬಿಜೆಪಿ ನೇತೃತ್ವದ ಸಿಎಂ ಯೋಗಿ ಆದಿತ್ಯನಾಥ್ ಸರಕಾರದ ಆಡಳಿತದಲ್ಲಿ ಕ್ರಿಮಿನಲ್ ಗಳಿಗೆ ಯಾವುದೇ ಭಯವಿಲ್ಲ ಎಂಬಂತಾಗಿದೆ. ಏಳು ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದುದಲ್ಲದೆ, ಅತೀಂದ್ರೀಯ ಶಕ್ತಿಯ ಒಲಿಸುವ ಉದ್ದೇಶದ ಆಚರಣೆಯೊಂದಕ್ಕಾಗಿ ಆಕೆಯ ಮೃತ ದೇಹದಿಂದ ಲಿವರ್ (ಯಕೃತ್ತು) ಕಿತ್ತು ತೆಗೆದ ಆಘಾತಕಾರಿ ಘಟನೆ ನಡೆದಿದೆ.

ಉತ್ತರ ಪ್ರದೇಶದ ಕಾನ್ಪುರದ ಗ್ರಾಮವೊಂದರ ಮಕ್ಕಳಿಲ್ಲದ ದಂಪತಿಯೊಂದು, ತಮಗೆ ಮಕ್ಕಳಾಗಲು ಅತೀಂದ್ರೀಯ ಶಕ್ತಿಯನ್ನು ಒಲಿಸಲು ಆಚರಣೆಯೊಂದನ್ನು ನಿರ್ವಹಿಸಲು, ಮಗುವಿನ ಅಂಗಾಂಗ ತರಲು ಇಬ್ಬರು ವ್ಯಕ್ತಿಗಳಿಗೆ 1,000 ರೂ. ಕೊಟ್ಟಿದ್ದರು ಎನ್ನಲಾಗಿದೆ.

ಆ ಇಬ್ಬರು ದುಷ್ಕರ್ಮಿಗಳು ತಮ್ಮ ನೆರೆಯ ಮಗುವೊಂದನ್ನು ಶನಿವಾರ ರಾತ್ರಿ ಅಪಹರಣ ಮಾಡಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಕೊಂಡುಕೊಳ್ಳಲು ಹೋಗುತ್ತಿದ್ದ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಬಳಿಕ, ಪಕ್ಕದ ಕಾಡೊಂದಕ್ಕೆ ಕೊಂಡೊಯ್ದು ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಬಳಿಕ ಆಕೆಯನ್ನು ಹತ್ಯೆ ಮಾಡಿ, ಆಕೆಯ ದೇಹದಿಂದ ಲಿವರ್ ಕಿತ್ತು ತೆಗೆದಿದ್ದಾರೆ. ಬಳಿಕ ಅದನ್ನು ಮಾಟ ಮಂತ್ರ ಮಾಡುವ ವ್ಯಕ್ತಿಯಲ್ಲಿಗೆ ಕೊಂಡೊಯ್ಯಲು ದಂಪತಿಗೆ ನೀಡಿದ್ದಾರೆ.

ದೇಹದಿಂದ ಇತರ ಕೆಲವು ಭಾಗಗಳನ್ನೂ ಕಿತ್ತು ತೆಗೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ನಾಲ್ವರು ಆರೋಪಿಗಳನ್ನೂ ಬಂಧಿಸಲಾಗಿದೆ.

ಬಂಧಿತ ಆರೋಪಿಗಳಲ್ಲಿ ಬಾಲಕಿಯನ್ನು ಅಪಹರಿಸಿದ ಅಂಕುಲ್, ಬೀರನ್ ನನ್ನು ಬಂಧಿಸಿ ಪೊಲೀಸರು ಬಾಯಿ ಬಿಡಿಸಿದಾಗ ಅವರು ತಪ್ಪೊಪ್ಪಿಕೊಂಡಿದ್ದಾರೆ. ಪರಶುರಾಮ್ ಎಂಬಾತನಿಗೆ 1999ರಲ್ಲಿ ಮದುವೆಯಾಗಿ, ಇಲ್ಲಿ ವರೆಗೆ ಮಕ್ಕಳಾಗಿರಲಿಲ್ಲ. ಆತ ತನ್ನ ಸಂಬಂಧಿಯೂ ಆದ ಅಂಕುಲ್ ಗೆ ಈ ದುಷ್ಕೃತ್ಯ ಎಸಗಲು ತಿಳಿಸಿದ್ದ.  

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ