ಉತ್ತರ ಪ್ರದೇಶದಲ್ಲಿ ಮತ್ತೆ ಇಬ್ಬರು ದಲಿತ ಬಾಲಕಿಯರ ಹತ್ಯೆ ಮಾಡಿ ಕೊಳದಲ್ಲಿ ಎಸೆದ ದುಷ್ಟರು

Prasthutha|

ಫತೇಪುರ : ಉತ್ತರ ಪ್ರದೇಶ ಫತೇಪುರ ಜಿಲ್ಲೆಯ ಅಸೋತರ್ ಎಂಬಲ್ಲಿನ ಇಬ್ಬರು ದಲಿತ ಬಾಲಕಿಯರನ್ನು ಭೀಕರವಾಗಿ ಹತ್ಯೆ ಮಾಡಿ ಕೊಳದಲ್ಲಿ ಎಸೆಯಲಾಗಿದೆ ಎಂದು ವರದಿಯಾಗಿದೆ.

ಇಬ್ಬರೂ ಹೆಣ್ಣು ಮಕ್ಕಳು ಗ್ರಾಮದ ದಿಲೀಪ್ ಧೋಬಿ ಎಂಬವರ ಮಕ್ಕಳು. ಮೃತರನ್ನು ಸುಮಿ (12) ಮತ್ತು ಕಿರಣ್ (8) ಎಂದು ಗುರುತಿಸಲಾಗಿದೆ.

- Advertisement -

ಬಾಲಕಿಯರ ಕಣ್ಣುಗಳ ಬಳಿ ಗಾಯದ ಗುರುತುಗಳು ಕಂಡುಬಂದಿದೆ.

ಮೃತ ದೇಹಗಳನ್ನು ಕೊಳದಿಂದ ಮೇಲೆತ್ತರಲಾಗಿದೆ. ಸಹೋದರಿಯರು ತರಲೆಂದು ತೋಟಕ್ಕೆ ಹೊದವರು ಮರಳಿ ಬಂದಿರಲಿಲ್ಲ.

ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನಂತರ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ಸಂತ್ರಸ್ತ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -