ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಷಿ ಮೊಮ್ಮಗಳು ಪಟಾಕಿ ಸಿಡಿದು ಸಾವು

Prasthutha|

ಲಖನೌ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ಸಂಸದೆ ರೀಟಾ ಬಹುಗುಣ ಜೋಶಿ ಅವರ ಮೊಮ್ಮಗಳು ಪಟಾಕಿ ಸಿಡಿದು, ಬೆಂಕಿ ಹಚ್ಚಲ್ಪಟ್ಟು ಸಾವಿಗೀಡದ ಘಟನೆ ದೀಪಾವಳಿಯ ರಾತ್ರಿ ನಡೆದಿದೆ.

ಆರು ವರ್ಷದ ಬಾಲಕಿ ಇತರ ಮಕ್ಕಳೊಂದಿಗೆ ಮನೆಯ ಟೆರೇಸ್ ಮೇಲೆ ಪಟಾಗಿ ಸಿಡಿಸಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಪಟಾಕಿ ಸಿಡಿದು ಬಾಲಕಿಯ ಬಟ್ಟೆಗೆ ಬೆಂಕಿ ಹತ್ತಿದೆ. ಪಟಾಕಿ ಸದ್ದಿನಿಂದಾಗಿ ಮನೆಯಲ್ಲಿದ್ದವರಿಗೆ ಆಕೆ ಕೂಗಿದ್ದುದು ಕೇಳಿಸಿರಲಿಲ್ಲ ಎನ್ನಲಾಗಿದೆ.

- Advertisement -

ಮನೆಯವರು ಟೆರೆಸ್ ಮೇಲೆ ಹೋಗುವಷ್ಟರ ಹೊತ್ತಿಗೆ ಬಾಲಕಿಗೆ ಸುಟ್ಟ ಸ್ಥಿತಿಯಲ್ಲಿ ಬಿದ್ದಿದ್ದಳು. ತಕ್ಷಣವೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿಂದ, ದೆಹಲಿ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವಿಗೀಡಾಗಿದ್ದಾಳೆ.

ವೈಮಾನಿಕ ಆಂಬುಲೆನ್ಸ್ ಮೂಲಕ ಆಕೆಯನ್ನು ದೆಹಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆಸ್ಪತ್ರೆ ತಲುಪುವುದರೊಳಗೆ ಆಕೆ ಕೊನೆಯುಸಿರೆಳೆದಿದ್ದಳು.  

- Advertisement -