ಗೌರಿ ಲಂಕೇಶ್ ಹತ್ಯೆ ಪ್ರಕರಣ: ನಾಲ್ಕು ವರ್ಷದ ನಂತರ ಮೇ 27 ರಂದು ವಿಚಾರಣೆ ಆರಂಭ

Prasthutha|

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬೆಂಗಳೂರಿನಲ್ಲಿ ಗುಂಡಿಕ್ಕಿ ಕೊಂದ ಘಟನೆ ನಡೆದ  ನಾಲ್ಕು ವರ್ಷಗಳ ನಂತರ, ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ 2000 (ಕೆಸಿಒಸಿಎ) ವಿಶೇಷ ನ್ಯಾಯಾಲಯವು ಈ ವರ್ಷದ ಮೇ 27 ರಂದು ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಲಿದೆ.

- Advertisement -

ದಿನಾಂಕವನ್ನು ಪ್ರಕಟಿಸಿದ ಕೆಸಿಒಸಿಎ ವಿಶೇಷ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಅನಿಲ್ ಭೀಮಣ್ಣ ಕತ್ತಿ ಮಂಗಳವಾರ ಗೌರಿ ಲಂಕೇಶ್ ಅವರ ಕಿರಿಯ ಸಹೋದರಿ ಮತ್ತು ಪ್ರಕರಣದ ಮಾಹಿತಿದಾರ ಕವಿತಾ ಲಂಕೇಶ್ ಅವರಿಗೆ ಸಮನ್ಸ್ ಜಾರಿಗೊಳಿಸಿ, ಮೇ 27 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.

 “ಕವಿತಾ ಲಂಕೇಶ್ ಅವರಿಗೆ ನೋಟಿಸ್ ಜೊತೆಗೆ, ಆರೋಪಿಗಳನ್ನು ಇರಿಸಲಾಗಿರುವ ಜೈಲು ಅಧಿಕಾರಿಗಳಿಗೆ ಆರೋಪಿಗಳನ್ನು ದೈಹಿಕವಾಗಿ ಅಥವಾ ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸುವಂತೆ ಸೂಚಿಸಲಾಗಿದೆ” ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್ ಬಾಲನ್  ತಿಳಿಸಿದ್ದಾರೆ.

Join Whatsapp