ಘನಘೋರ ಅಪಘಾತ | ಬಸ್ಸೊಳಗೆ ನುಗ್ಗಿಬಂತು ಪೈಪ್ ; ಮಹಿಳೆಯ ರುಂಡವೇ ಕಟ್ ; ಇಬ್ಬರು ಬಲಿ

Prasthutha|

ಪಾಲಿ : ಘನಘೋರ ಅಪಘಾತವೊಂದು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ. ಕಾಮಗಾರಿಯೊಂದಕ್ಕೆ ಬಳಸುತ್ತಿದ್ದ ಗ್ಯಾಸ್ ಪೈಪ್ ಲೈನ್ ಆಕಸ್ಮಾತ್ತಾಗಿ ಬಸ್ ನೊಳಗೆ ನುಗ್ಗಿದ ಪರಿಣಾಮ ಬಸ್ಸಿನಲ್ಲಿ, ಮಗುವೊಂದನ್ನು ಹಿಡಿದುಕೊಂಡು ಕುಳಿತಿದ್ದ ಮಹಿಳೆಯ ರುಂಡವೇ ಕತ್ತರಿಸಲ್ಪಟ್ಟಿದೆ. ಘಟನೆಯಲ್ಲಿ ಇನ್ನೋರ್ವ ಮೃತಪಟ್ಟಿದ್ದು, 24 ಮಂದಿ ಗಾಯಗೊಂಡಿದ್ದಾರೆ.

ರುಂಡ ಕತ್ತರಿಸಲ್ಪಟ್ಟ ಮಹಿಳೆ ನೈನಾದೇವಿ ಎಂದು ಗುರುತಿಸಲಾಗಿದೆ. ಮಹಿಳೆ ಹಿಡಿದುಕೊಂಡಿದ್ದ ಮಗು ಸುರಕ್ಷಿತವಾಗಿದೆ.

- Advertisement -

ಬಸ್ ಮಾರಾವಾಡದಿಂದ ಪುಣೆಯತ್ತ ಹೊರಟಿತ್ತು. ಸಾಂಡೇರಾವ್ ಬಳಿ ಹೆದ್ದಾರಿ ಪಕ್ಕದಲ್ಲಿಯೇ ಕೆಲವು ದಿನಗಳಿಂದ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಯುತಿತ್ತು. ಈ ವೇಳೆ ಪೈಪ್ ಎತ್ತುತ್ತಿದ್ದ ಕ್ರೇನ್ ನ ನಿಯಂತ್ರಣ ತಪ್ಪಿ, ಪೈಪ್ ಬಸ್ ನೊಳಗೆ ನುಗ್ಗಿದೆ. ಬಸ್ ಸ್ಲೀಪರ್ ಕೋಚ್ ಆಗಿದ್ದುದರಿಂದ ಹೆಚ್ಚಿನವರು ಮಲಗಿದ್ದು, ಹೆಚ್ಚಿನ ಅಪಾಯಗಳಾಗಿಲ್ಲ. ಕುಳಿತಿದ್ದವರಿಗೆ ಗಾಯಗಳಾಗಿವೆ.  

- Advertisement -