ನ್ಯಾಯಾಧೀಶರುಗಳ ಪತ್ನಿಯರ ಬಗ್ಗೆ ಅವಹೇಳನಕಾರಿ ಹೇಳಿಕೆ ಕೇಸ್ | ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಕರ್ಣನ್ ಬಂಧನ

Prasthutha|

ಚೆನ್ನೈ : ಮಹಿಳಾ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳ ಪತ್ನಿಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಮಾತನಾಡಿದ್ದಾರೆನ್ನಲಾದ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರನ್ನು ಇಂದು ಬಂಧಿಸಲಾಗಿದೆ.

ಚೆನ್ನೈ ಪೊಲೀಸರು ನ್ಯಾ. ಕರ್ಣನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ನ್ಯಾ. ಕರ್ಣನ್ ಅವರು ನ್ಯಾಯಾಧೀಶರುಗಳ ಪತ್ನಿಯಂದಿರು ಮತ್ತು ಮಹಿಳಾ ನ್ಯಾಯಾಧೀಶರುಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರೆನ್ನಲಾಗಿದೆ. ಈ ಹೇಳಿಕೆಯ ವೀಡಿಯೊ ಯೂಟ್ಯೂಬ್ ನಲ್ಲಿ ಪ್ರಕಟವಾಗಿತ್ತು.

- Advertisement -

ನ್ಯಾ. ಕರ್ಣನ್ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಮದ್ರಾಸ್ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. 2017ರಲ್ಲಿ ನ್ಯಾ. ಕರ್ಣನ್ ಅವರು ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದಾಗ, ನ್ಯಾಯಾಂಗ ನಿಂದನೆ ಆರೋಪದಡಿ 6 ತಿಂಗಳ ಶಿಕ್ಷೆಗೆ ಗುರಿಯಾಗಿದ್ದರು.

- Advertisement -