ವಂಚನೆ ಪ್ರಕರಣ : ಮಹಾತ್ಮ ಗಾಂಧೀಜಿ ಮರಿಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ಏಳು ವರ್ಷ ಜೈಲು ಶಿಕ್ಷೆ

Prasthutha|

ಜೊಹಾನ್ಸ್‌ ಬರ್ಗ್‌ : ನಕಲಿ ದಾಖಲೆಗಳ ಮೂಲಕ ಕೋಟ್ಯಂತರ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾತ್ಮ ಗಾಂಧೀಜಿ ಮರಿಮೊಮ್ಮಗಳು ಆಶಿಶ್‌ ಲತಾರಾಮ್‌ ಗೋಬಿನ್‌ ಅವರಿಗೆ ದಕ್ಷಿಣ ಆಫ್ರಿಕಾ ನ್ಯಾಯಾಲಯವೊಂದು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ದಕ್ಷಿಣ ಆಫ್ರಿಕಾದ ಡರ್ಬಾನ್‌ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

ಉದ್ಯಮಿಯೊಬ್ಬರಿಗೆ ೩.೨೨ ಕೋಟಿ ರೂ. ವಂಚಿಸಿದ ಆರೋಪ ಆಶಿಶ್‌ ಲತಾ ಅವರ ಮೇಲಿತ್ತು. ಈ ಬಗ್ಗೆ ೨೦೧೫ರಲ್ಲಿ ಪ್ರಕರಣ ದಾಖಲಾಗಿತ್ತು. ಇಳಾ ಗಾಂಧಿ ಮತ್ತು ಮೇವಾರಾಮ್‌ ಗೋಬಿನ್‌ ಪುತ್ರಿಯಾದ ಆಶಿಶ್‌ ಲತಾ ನ್ಯೂ ಆಫ್ರಿಕಾ ಅಲೈನ್ಸ್‌ ಕಂಪೆನಿ ನಿರ್ದೇಶಕ ಮಹಾರಾಜ್‌ ಅವರಿಗೆ ಭಾರತದಿಂದ ಮೂರು ಕಂಟೇನರ್‌ ಲಿನನ್‌ ಬಟ್ಟೆಗಳನ್ನು ಕಳುಹಿಸುವುದಾಗಿ ಹೇಳಿ ವಂಚಿಸಿದ್ದಾರೆ ಎಂಬ ಆರೋಪವಿತ್ತು.

- Advertisement -

ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಶಿಶ್ ಲತಾಗೆ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.

- Advertisement -