ಬ್ರಿಟನ್’ನಿಂದ ಗಡಿಪಾರು ತಪ್ಪಿಸಲು ಸುಪ್ರೀಂ ಕೋರ್ಟಿಗೆ ಮೊರೆಯಿಟ್ಟ ಪರಾರಿ ಉದ್ಯಮಿ ನೀರವ್ ಮೋದಿ

Prasthutha|

ಲಂಡನ್: ಭಾರತದ ಬ್ಯಾಂಕುಗಳಿಗೆ ವಂಚಿಸಿ ಪರಾರಿಯಾಗಿರುವ ವಜ್ರದ ಉದ್ಯಮಿ ನೀರವ್ ಮೋದಿ ಬ್ರಿಟನ್ ಹೈಕೋರ್ಟ್ ನೀಡಿದ ತೀರ್ಪಿನಂತೆ ಭಾರತಕ್ಕೆ ಗಡಿಪಾರು ಶಿಕ್ಷೆಯಿಂದ ಪಾರಾಗಲು ಬ್ರಿಟನ್ನಿನ ಸುಪ್ರೀಂ ಕೋರ್ಟು ಮೆಟ್ಟಿಲೇರಿದ್ದಾನೆ.

- Advertisement -

51 ವರ್ಷದ ವಜ್ರೋದ್ಯಮಿ ನೀರವ್ ಮೋದಿ ಈ ತಿಂಗಳ ಆರಂಭದಲ್ಲಿ ಮಾನಸಿಕ ಖಿನ್ನತೆಯ ಕಾರಣ ಆತ್ಮಹತ್ಯೆ ಪ್ರಯತ್ನದ ಕಾರಣ ನೀಡಿ ಪಾರಾಗಲು ನೋಡಿದ್ದ. ಆದರೆ ಹೈಕೋರ್ಟ್ ಅದನ್ನು ಒಪ್ಪದೆ ಭಾರತಕ್ಕೆ ವಾಪಸು ಗಡಿಪಾರು ಮಾಡಲು ಆದೇಶಿಸಿತ್ತು.

ಭಾರತದ ಇಡಿ- ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಕೋರಿಕೆ ಮನ್ನಿಸಿದ ಲಂಡನ್ ಹೈಕೋರ್ಟ್, ನೀರವ್ ಮೋದಿಯನ್ನು ಭಾರತಕ್ಕೆ ಒಪ್ಪಿಸುವಂತೆ ತೀರ್ಪು ನೀಡಿತು.

- Advertisement -

ಸಿಪಿಎಸ್- ಕ್ರೌನ್ ಪ್ರಾಸಿಕ್ಯೂಶನ್ ಸರ್ವಿಸ್ ಮೂಲಕ ಭಾರತದ ಕಡೆಯವರು ಬ್ರಿಟನ್ ಹೈಕೋರ್ಟಿಗೆ ನೀರವ್ ಮೋದಿಯನ್ನು ಹಸ್ತಾಂತರಿಸಲು ಕೋರಿತ್ತು. ಜಡ್ಜ್ ಬರವಣಿಗೆಯ ಮೂಲಕ ನೀಡುವ ತೀರ್ಪು ಅದು. “ನೀರವ್ ಮೋದಿ ಆರೋಗ್ಯದ ವರದಿ ತೃಪ್ತಕರವಾಗಿ ಬಂದಿದೆ.  ಆತ್ಮಹತ್ಯೆಯ ಸಾಧ್ಯತೆ ಎನ್ನುವುದು ಗಡಿಪಾರು ಮಾಡಲು ತಡೆಯಲ್ಲ, ಹೊರದೋಡಿ” ಎಂದು ಲಿಖಿತ ತೀರ್ಪು ನೀಡಿದೆ.

ಭಾರತ ಸರಕಾರವು ಮುಂಬೈಯ ಆರ್ಥರ್ ರಸ್ತೆ ಜೈಲಿನ ಬ್ಯಾರಕ್ 12ರಲ್ಲಿ ನೀರವ್ ಮೋದಿಯ ಆರೋಗ್ಯ ಉಲ್ಬಣತೆಯ ಮೇಲೆ ಚಿಕಿತ್ಸೆಗೆ ಅಗತ್ಯದ ಎಲ್ಲ ಏರ್ಪಾಟು ಮಾಡುವುದಾಗಿಯೂ ಪತ್ರ ನೀಡಿತ್ತು.

ನೀರವ್ ಮೋದಿ ಈಗ ಲಂಡನ್’ನ ವಾಂಡ್ಸ್ ವರ್ತ್ ಜೈಲಿನಲ್ಲಿ ಇದ್ದಾನೆ. ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ ಟೋಪಿ ಹಾಕಿ ವಿದೇಶಕ್ಕೆ ಪರಾರಿಯಾಗಿದ್ದ ಆತ ಆಮೇಲೆ ಲಂಡನ್ ಸೇರಿದ್ದ. ಪಂಜಾಬ್ ನ್ಯಾಶನಲ್ ಬ್ಯಾಂಕಿನ 13,000 ಕೋಟಿ ರೂಪಾಯಿ ಹಗರಣದಲ್ಲಿ ನೀರವ್ ಮೋದಿ ಮುಖ್ಯ ಆರೋಪಿ.

Join Whatsapp