ನವದೆಹಲಿ: ಕೇಂದ್ರ ಸರ್ಕಾರದಿಂದ ಇತ್ತೀಚೆಗೆ ನಿಷೇಧಕ್ಕೊಳಗಾಗಿರುವ ಪಿ.ಎಫ್.ಐ ಸದಸ್ಯರ ವಿರುದ್ಧ ದೆಹಲಿ ಪೊಲೀಸರು ಶಾಹೀನ್’ಬಾಗ್ ಠಾಣೆಯಲ್ಲಿ UAPA ಕಾಯ್ದೆಯಡಿ ಹೊಸ ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಸೂಚನೆಯ ಮೇರೆಗೆ ಪೊಲೀಸರು ಶಾಹೀನ್’ಬಾಗ್’ನಲ್ಲಿರುವ ಮೂರು ಪಿ.ಎಫ್.ಐ ಕಚೇರಿಗಳನ್ನು ಸೀಲ್ ಮಾಡಿದ್ದರು.
ಆರಂಭ ಕಾಲಘಟದಲ್ಲಿ ಪಿ.ಎಫ್.ಐ’ಗೆ ಕೇವಲ ಒಂದು ಕಚೇರಿ ಮಾತ್ರ ಇತ್ತು. ನಂತರ ಅವರು ಶಾಹೀನ್’ಬಾಗ್’ನಲ್ಲಿ ಇನ್ನೂ ಎರಡು ಕಚೇರಿಗಳನ್ನು ತೆರೆದರು. ಇದೀಗ ಶಾಹೀನ’ಬಾಗ್ ಅನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.