ಮಂಗಳೂರಿನಲ್ಲಿ ಶೋಭಾಯಾತ್ರೆ: ಅ.6ರಿಂದ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

Prasthutha|

ಮಂಗಳೂರು: ನಗರದ ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದ ಶಾರದಾ ಮೂರ್ತಿಯ ಶೋಭಾಯಾತ್ರೆಯ ವೇಳೆ ಶಾರದಾ ಮಾತೆಯ ವಿಗ್ರಹ ಹಾಗೂ ವಿವಿಧ ಟ್ಯಾಬ್ಲೋಗಳು ಮತ್ತು ಅಪಾರ ಜನಸಂಖ್ಯೆ ಸೇರುವ ನಿರೀಕ್ಷೆ ಇರುವುದರಿಂದ ಕಾನೂನು ಸುವ್ಯವಸ್ಥೆ, ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಅ.6ರ ಗುರುವಾರ ಸಂಜೆ 6 ಗಂಟೆಯಿಂದ ಅ.7ರ ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.

- Advertisement -

ವಿವರ ಇಂತಿದೆ:

ಬಾಲಾಜಿ ಜಂಕ್ಷನ್‍ ನಿಂದ ರಥಬೀದಿ ವೆಂಕಟರಮಣ ದೇವಸ್ಥಾನದ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳು ಬಾಲಾಜಿ ಜಂಕ್ಷನ್‍ ನಿಂದ ಲೋವರ್ ಕಾರ್‍ಸ್ಟ್ರೀಟ್ ನಿಂದಾಗಿ ಅಜೀಜುದ್ದೀನ್ ರಸ್ತೆಯ ಮುಖಾಂತರ ಸಂಚರಿಸುವುದು.

- Advertisement -

 ಗಣಪತಿ ಹೈಸ್ಕೂಲ್ ರಸ್ತೆ ಜಂಕ್ಲನ್ ಮುಖಾಂತರ ಕಾರ್ ಸ್ಟ್ರೀಟ್  ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳು ತಾರಾ ಕ್ಲಿನಿಕ್ ಮುಂದುಗಡೆಯಿಂದ ಶರವು ದೇವಸ್ಥಾನದ ಎದುರಿನಿಂದಾಗಿ ಕೆ.ಎಸ್.ಆರ್ ರಸ್ತೆ ಮುಖೇನ ಸಂಚರಿಸುವುದು.

ಕೇಂದ್ರ ಮಾರುಕಟ್ಟೆಯಿಂದ ಕಾರ್ ಸ್ಟ್ರೀಟ್  ಕಡೆಗೆ ಬರುವ ವಾಹನಗಳ ಸಂಚಾರವನ್ನು ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಸದರಿ ವಾಹನಗಳು ಕೇಂದ್ರ ಮಾರುಕಟ್ಟೆ ರಸ್ತೆಯಲ್ಲಿ ಸಂಚರಿಸಿ ಕ್ಲಾಕ್‍ ಟವರ್ ಮುಖೇನ ಮುಂದುವರೆಯುವುದು ಹಾಗೂ ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಕಟಣೆಯಲ್ಲಿ ತಿಳಿಸಿದ್ದಾರೆ.