ಜಮೀಯ್ಯತುಲ್ ಫಲ್ಹಾ ಮೂಡಬಿದಿರೆ, ಆದರ್ಶ ಶಿಕ್ಷಣ ಸಂಸ್ಥೆ ತೋಡಾರು ಹಾಗೂ ಯೆನೆಪೋಯ ಆಸ್ಪತ್ರೆ ಸಹಭಾಗಿತ್ವದಲ್ಲಿ ಉಚಿತ ಬೃಹತ್ ವೈದ್ಯಕೀಯ ಶಿಬಿರ

Prasthutha|

ಮೂಡಬಿದಿರೆ: ಜಮೀಯ್ಯತುಲ್ ಫಲ್ಹಾ ಮೂಡಬಿದಿರೆ, ಆದರ್ಶ ಶಿಕ್ಷಣ ಸಂಸ್ಥೆ ತೋಡಾರು ಹಾಗೂ ಯೆನೆಪೋಯ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ದೇರಳಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 07-08-2022ರ ಭಾನುವಾರ ಬೆಳಗ್ಗೆ. 9:30ರಿಂದ ತೋಡಾರು ಆದರ್ಶ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಬೃಹತ್ ವೈದ್ಯಕೀಯ ಶಿಬಿರ ನಡೆಯಲಿದೆ.

- Advertisement -

ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆ, ನೇತ್ರ ತಪಾಸಣೆ, ಕಿವಿ ಮೂಗು ಮತ್ತು ಗಂಟಲು ತಪಾಸಣೆ, ಚರ್ಮ ತಪಾಸಣೆ, ರಕ್ತದೊತ್ತಡ ಮತ್ತು ರಕ್ತ ವರ್ಗೀಕರಣ ತಪಾಸಣೆ, ಬಿಪಿ ಶುಗರ್ ತಪಾಸಣೆ, ಸ್ತ್ರೀ ರೋಗ ತಪಾಸಣೆ, ಮಕ್ಳಳ ತಪಾಸಣೆ, ಎಲುಬು ತಪಾಸಣೆ, ಔಷಧಾಲಯ ಸೇವೆಗಳು ಲಭ್ಯವಿದೆ. ಅಲ್ಲದೇ  ದಂತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದ್ದು ದಂತ(ಹಲ್ಲುಗಳಿಗೆ) ಸಂಬಂಧಪಟ್ಟ ತಪಾಸಣೆಗಳು ಉಚಿತವಾಗಿ ಲಭ್ಯವಿದೆ.

ಸಾರ್ವಜನಿಕರು ಶಿಬಿರದ ಸಂಪೂರ್ಣ ಪ್ರಯೋಜನವನ್ನು ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Join Whatsapp