ಶಾಸಕ ಸುರೇಶ್ ಗೌಡ ಸೇರಿ 10 ಮಂದಿ ವಿರುದ್ಧ ಕೇಸ್

Prasthutha|

ಮಂಡ್ಯ: ನಾಗಮಂಗಲ ಶಾಸಕ ಸುರೇಶ್‌ಗೌಡ ಸೇರಿ 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

ನಾಗಮಂಗಲದ ಹಾಲ್ತಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಆ.4ರಂದು ನಡೆದಿದ್ದ ಶಾಸಕ, ರೈತರು ಹಾಗೂ ಇಲಾಖೆ ಸಿಬ್ಬಂದಿ ನಡುವಿನ ಜಗಳಕ್ಕೆ ಸಂಬಂಧಿಸಿದಂತೆ ದೂರು ಆರ್ ಎಫ್ ಒ ಸತೀಶ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಸೇರಿ 10 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಾಣ ಬೆದರಿಕೆ, ಸರ್ಕಾರಿ ಕೆಲಸಕ್ಕೆ ಅಡ್ಡಿ ಹಾಗೂ ಅವ್ಯಾಚ್ಯ ಶಬ್ಧಗಳಿಂದ ನಿಂದನೆ ಕುರಿತು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

- Advertisement -

ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಕೆಲವರು ಒತ್ತುವರಿ ಮಾಡಿಕೊಂಡಿರುವ ಆರೋಪವಿದ್ದು, ಒತ್ತುವರಿ ತೆರವು ಮಾಡಲು ಹೋದಾಗ ಶಾಸಕರು ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡುವ ಜತೆಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಕಳೆದ ಆ.5ರಂದು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ದೂರು ದಾಖಲಿಸಿದ್ದು, ಕಾನೂನು ಕ್ರಮಕ್ಕೆ ಆರ್ ಎಫ್ ಒ ಸತೀಶ್ ಒತ್ತಾಯಿಸಿದ್ದಾರೆ. ಅರಣ್ಯ ಸಂಪತ್ತನ್ನು ನಮ್ಮ ವಶಕ್ಕೆ ಕೊಡಿಸುವುದರ ಜತೆಗೆ ಅಧಿಕಾರಿ ಮತ್ತು ಸಿಬ್ಬಂದಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ. ದೂರಿನ ಜತೆಗೆ ಸಾಕ್ಷ್ಯವಾಗಿ ಘಟನೆ ನಡೆದ ದಿನದ ವಿಡಿಯೋ, ಫೋಟೋಗಳನ್ನೂ ಸಲ್ಲಿಸಿದ್ದಾರೆ.

Join Whatsapp