ಬೆಂಗಳೂರು: ಗೋಲ್ಡನ್ ಪ್ರೆಶ್ ಕಂಪನಿ ಕೋಳಿ ಮರಿ ಸಾಕಾಣಿಕೆಗೆ ಸಂಬಂಧಿಸಿದಂತೆ ರೈತರಿಗೆ ನೀಡಬೇಕಿದ್ದ ಲಕ್ಷಾಂತರ ರೂಪಾಯಿ ವಂಚಿಸಿದೆ ಎಂದು ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಸದಸ್ಯರು, ರೈತರು ಬೆಂಗಳೂರಿನ ಗೋಲ್ಡನ್ ಪ್ರೆಶ್ ಕಂಪನಿ ಎದುರು ಪ್ರತಿಭಟನೆ ನಡೆಸಿ ಕಂಪನಿ ವಿರುದ್ದ ಹೈಗ್ರೌಂಡ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ. ನಂಜುಂಡಪ್ಪ ಎ.ಸಿ. ಗೋಲ್ಡನ್ ಕಂಪನಿ ದೊಡ್ಡ ಬಳ್ಳಾಪುರ, ಚಿಕ್ಕ ಬಳ್ಳಾಪುರ, ಕುಣಿಗಲ್, ಹೊಸಕೊಟೆ ಇನ್ನು ಹಲವು ಕಡೆ ಬ್ರಾಂಚ್ ಹೊಂದಿದ್ದು ರೈತರು ಮತ್ತು ಇವರ ನಡುವೆ ನಡೆದ ಒಪ್ಪಂದದ ಪ್ರಕಾರ ಕೋಳಿ ಮರಿ, ಪೀಡ್ಸ್, ಮೆಡಿಸನ್ ನೀಡುತ್ತಾರೆ. ರೈತರ ಪ್ರಕಾರ ಒಂದು ಕೆಜಿ ಕೋಳಿಗೆ 6 ರೂಪಾಯಿ ಇಪ್ಪತ್ತು ಪೈಸೆ ನೀಡಲಾಗುತ್ತದೆ. ಇದೇ ದರಕ್ಕೆ ಸುಮಾರು ದಿನಗಳಿಂದ ಕೋಳಿ ಸಾಕಾಣಿಕೆ ಮಾಡಿಕೊಂಡು ಬರಲಾಗುತ್ತಿದ್ದು. ಆದರೆ ಕಳೆದ ಫೆಬ್ರವರಿ ತಿಂಗಳಿಂದ ಕೋಳಿ ಮರಿ ಕೊಟ್ಟು ತಾವೇ ತೆಗೆದುಕೊಂಡು ಇದುವರೆಗೂ ಯಾವುದೇ ರೀತಿಯ ಹಣ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೋಳಿ ಸಾಕಾಣಿಕೆಗೆ ಸಂಬಂದಿಸಿದಂತೆ ರೈತರಿಗೆ ಆರು ರೂಪಾಯಿ ಇಪ್ಪತ್ತು ಪೈಸೆ ನೀಡಲೇ ಬೇಕು ಎಂದು ರಾಜ್ಯ ಸರ್ಕಾರ ಆದೇಶ ಮಾಡಿದ್ದು. ಅದರಂತೆ ಎಲ್ಲ ಕಂಪನಿಗಳು ನಡೆದುಕೊಳ್ಳಬೇಕು. ಆದರೆ ಗೋಲ್ಡನ್ ಗ್ರೂಪ್ ಕಂಪನಿಯವರು ರೈತರಿಗೆ ಯಾವುದೇ ಹಣ ನೀಡದೇ ದುರಹಂಕಾರದಿಂದ ವರ್ತಿಸಿದ್ದಾರೆ. ನಿನ್ನೆ ಮಂಗಳವಾರ ರೈತರಿಗೆ ಹಣ ನೀಡುತ್ತೆವೆಂದು ಭರವಸೆ ನೀಡಿ ಇಂದು ರೈತರು ಹಣ ಪಡೆಯಲು ಬಂದರೆ ದೌರ್ಜನ್ಯ ವೆಸಗಿದ್ದಾರೆ ಈ ಹಿನ್ನೆಲೆಯಲ್ಲಿ ಕಂಪನಿ ಸಿಇಒ, ಕಂಪನಿ ವಿರುದ್ಧ ಹೈಗ್ರೌಂಡ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದರು.