ಈಕ್ವೆಡಾರ್ ಜೈಲಿನಲ್ಲಿ ಭೀಕರ ಘರ್ಷಣೆ: 30 ಕ್ಕೂ ಅಧಿಕ ಕೈದಿಗಳ ಹತ್ಯೆ

Prasthutha|

ಈಕ್ವೆಡಾರ್: ಕರಾವಳಿ ನಗರವಾದ ಗುವಯಾಕ್ವಿಲ್ ನಲ್ಲಿ ಕೈದಿಗಳ ನಡುವೆ ಭೀಕರ ಕಾಳಗದಲ್ಲಿ ಸುಮಾರು 30 ಕ್ಕೂ ಮಿಕ್ಕಿದ ಕೈದಿಗಳು ಹತ್ಯೆಯಾಗಿದ್ದು, 48 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಪೊಲೀಸ್ ಮತ್ತು ಸೇನಾ ಕಾರ್ಯಾಚರಣೆಯ ಐದು ಗಂಟೆಗಳ ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಜೈಲಿನ ಮೂಲಗಳು ತಿಳಿಸಿವೆ.

ರಾಜ್ಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಗವರ್ನರ್ ಪ್ಯಾಬ್ಲೊ ಅರೋಸೆಮೆನಾ ತಿಳಿಸಿದರು.

- Advertisement -

ಈ ಹಿಂದೆಯೂ ಈಕ್ವೇಡಾರ್ ಜೈಲಿನಲ್ಲಿ ನಡೆದ ಗಲಭೆಯಲ್ಲಿ 100 ಕ್ಕೂ ಮಿಕ್ಕಿದ ಕೈದಿಗಳನ್ನು ಕೊಲ್ಲಲಾಗಿತ್ತು. ಗಲಭೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈಕ್ವೇಡಾರ್ ಜೈಲಿನಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ ಎಂದು ಅಧ್ಯಕ್ಷ ಗಿಲ್ಲೆರ್ಮೊ ಲಾಸೊ ತಿಳಿಸಿದ್ದಾರೆ.

Join Whatsapp