ಮಾಜಿ ಸ್ಪೀಕರ್ ರಮೇಶ್ ಕುಮಾರ್ ಓರ್ವ ಭ್ರಷ್ಟಾಚಾರಿ: ಸಚಿವ ಸುಧಾಕರ್ ಆರೋಪ

Prasthutha|

ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಓರ್ವ ಭ್ರಷ್ಟಾಚಾರಿ. ಅವರ ಅವ್ಯವಹಾರದ ಬಗ್ಗೆ ತನಿಖೆ ನಡೆದರೆ ರಮೇಶ್ ಕುಮಾರ್ ಸೇರಿದಂತೆ ಆಡಳಿತ ಮಂಡಳಿಯ ಕೆಲವರು ಜೈಲಿಗೆ ಹೋಗುತ್ತಾರೆ. ಹೀಗಾಗಿ ಡಿಸಿಸಿ ಬ್ಯಾಂಕ್ ನಲ್ಲಿ ತನಿಖೆ ನಡೆಯದಂತೆ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

- Advertisement -


ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋಪಾಲಗೌಡ ಕೇವಲ ಹೆಸರಿಗೆ ಮಾತ್ರ ಇದ್ದಾರೆ. ಬ್ಯಾಂಕ್ ನಲ್ಲಿ ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್ ಅವರದ್ದೇ ದರ್ಬಾರ್. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಮಹಾ ಮಂಡಳಿ ವಿಭಜನೆಗೆ ಶಾಸಕ ರಮೇಶ್ ಕುಮಾರ್, ಎನ್.ಹೆಚ್.ಶಿವಶಂಕರ ರೆಡ್ಡಿ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಯಾರು ಎಷ್ಟೇ ತಡೆದರೂ ಎರಡು ಸಂಸ್ಥೆಗಳನ್ನು ವಿಭಜನೆ ಮಾಡಿಯೇ ಸಿದ್ಧ ಎಂದು ಗುಡುಗಿದರು.

Join Whatsapp