ಶ್ರೀಲಂಕಾಕ್ಕೆ ಬಂದಿಳಿದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ

Prasthutha|

ಕೊಲಂಬೊ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ನಂತರ ದೇಶದಿಂದ ಪಲಾಯನ ಮಾಡಿದ ಮಾಜಿ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ಏಳು ವಾರಗಳ ನಂತರ ದೇಶಕ್ಕೆ ಮರಳಿದ್ದಾರೆ.

- Advertisement -

ಬ್ಯಾಂಕಾಕ್ ನಿಂದ ಸಿಂಗಾಪುರ್ ಮಾರ್ಗವಾಗಿ ಕೊಲಂಬೊದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಮಧ್ಯರಾತ್ರಿ ಬಂದಿಳಿದ ರಾಜಪಕ್ಸೆ ಅವರನ್ನು ಅವರ ಪಕ್ಷದ ಶಾಸಕರು ಸ್ವಾಗತಿಸಿದರು. ನಂತರ, ವಿಮಾನ ನಿಲ್ದಾಣದಿಂದ ಶಸ್ತ್ರಸಜ್ಜಿತ ಸೈನಿಕರ ಭಾರಿ ಕಾವಲಿನಲ್ಲಿ ರಾಜಧಾನಿ ಕೊಲಂಬೊದ ಕೇಂದ್ರದಲ್ಲಿ  ಅವರಿಗೆ ಹಂಚಿಕೆ ಮಾಡಲಾದ ಸರ್ಕಾರಿ ಸ್ವಾಮ್ಯದ ಮನೆಯನ್ನು ತಲುಪಿದರು.

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜುಲೈ 13 ರಂದು ಕೊಲಂಬೋದಲ್ಲಿನ ಅಧ್ಯಕ್ಷರ ಭವನ ಮತ್ತು ರಾಜಧಾನಿಯ ಇತರ ಹಲವಾರು ಸರ್ಕಾರಿ ಕಟ್ಟಡಗಳಿಗೆ ಮುತ್ತಿಗೆ ಹಾಕಿದ ನಂತರ ಜುಲೈ 9 ರಂದು ಅವರ ತಕ್ಷಣದ ರಾಜೀನಾಮೆಗೆ ಒತ್ತಾಯಿಸಿ ತಿಂಗಳುಗಳ ಕಾಲ   ಸಾರ್ವಜನಿಕ ಪ್ರತಿಭಟನೆಗಳು ನಡೆದಿತ್ತು. ನಂತರ ಗೊಟಬಯ ರಾಜಪಕ್ಸೆ ದೇಶದಿಂದ ಪಲಾಯನ ಮಾಡಿದ್ದರು.

Join Whatsapp