ಚೆಕ್ ಬೌನ್ಸ್ ಕೇಸ್: ಕಾಂಗ್ರೆಸ್ ಮಾಜಿ ಶಾಸಕ ಕೆ ವೆಂಕಟಸ್ವಾಮಿಗೆ ಹತ್ತೂವರೆ ಲಕ್ಷ ದಂಡ

Prasthutha|

ಬೆಂಗಳೂರು: ದೇವನಹಳ್ಳಿ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಕೆ. ವೆಂಕಟಸ್ವಾಮಿ ಚೆಕ್ ಬೌನ್ಸ್ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಾರಿದೆ. ಜೊತೆಗೆ ಕಾಂಗ್ರೆಸ್ ಶಾಸಕ ವೆಂಕಟಸ್ವಾಮಿಗೆ 10.50 ಲಕ್ಷ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದರೆ 6 ತಿಂಗಳು ಸೆರೆವಾಸದ ಶಿಕ್ಷೆಯನ್ನು ವಿಧಿಸುವುದಾಗಿ ಆದೇಶಿಸಿದೆ.

- Advertisement -

ನಾಗಭೂಷಣ ಎಂಬುವರು ನೀಡಿದ ಖಾಸಗಿ ದೂರಿನ ಅನ್ವಯ ವೆಂಕಟಸ್ವಾಮಿ ತಪ್ಪಿತಸ್ಥ ಎಂದು ಕೋರ್ಟ್ ವಿಧಿಸಿದ್ದು ಸಾಲಕ್ಕೆ ಪ್ರತಿಯಾಗಿ ನೀಡಿದ್ದ ಚೆಕ್ ಬೌನ್ಸ್ ಆದ ಹಿನ್ನೆಲೆ ದೂರು ದಾಖಲಿಸಿದ್ದರು ಎನ್ನಲಾಗಿದೆ.

Join Whatsapp