ಶಿವಸೇನೆಯ ಬಂಡಾಯ ಶಾಸಕರಿರುವ ರೆಸೋರ್ಟ್ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ

Prasthutha|

ಗುವಾಹಟಿ: ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಶಿವಸೇನೆಯಿಂದ ಬಂಡಾಯವೆದ್ದ 40 ಕ್ಕಿಂತ ಹೆಚ್ಚು ಶಾಸಕರು ತಂಗಿರುವ ಗುವಾಹಟಿಯ ಹೋಟೆಲ್ ಮುಂಭಾಗದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.

- Advertisement -

‘ರಾಜ್ಯದಲ್ಲಿ ಭೀಕರ ಪ್ರವಾಹ ಎದುರಾಗುತ್ತಿರುವಾಗ, ರೆಸೋರ್ಟ್ ರಾಜಕಾರಣದ ಬಲೆಯಲ್ಲಿ ಸಿಲುಕಿರುವ ಶಿವಸೇನೆಯ ಶಾಸಕರು ಇಲ್ಲಿರುವುದು ಸೂಕ್ತವಲ್ಲ. ಈ ಕೂಡಲೇ ಇಲ್ಲಿಂದ ತೊರೆಯಬೇಕು’ ಎಂದು ಕಾಂಗ್ರೆಸ್ ಪ್ರತಿಭಟನೆ ಮೂಲಕ ಒತ್ತಾಯಿಸಿದೆ.

ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ನೇತೃತ್ವದ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಹಲವು ಶಾಸಕರು ಬಂಡಾಯವೆದ್ದಿದ್ದರು.

Join Whatsapp