ಅಗ್ನಿವೀರ್ ಯೋಜನೆ RSSನಿಂದ ಬಂದಿದೆಯೇ ಹೊರತು, ಭಾರತೀಯ ಸೇನೆಯಿಂದಲ್ಲ: ರಾಹುಲ್ ಗಾಂಧಿ

Prasthutha|

ನವದೆಹಲಿ: ಅಗ್ನಿವೀರ್ ಯೋಜನೆ ಆರ್ ಎಸ್ ಎಸ್’ನಿಂದ ಬಂದಿದೆಯೇ ಹೊರತು, ಭಾರತೀಯ ಸೇನೆಯಿಂದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -

ದೇಶಾದ್ಯಂತ ಅಗ್ನಿವೀರ್ ಯೋಜನೆಯ ಬಗ್ಗೆ ಜನರು ಧನಾತ್ಮಕವಾಗಿ ಮಾತನಾಡಿದರು. ಆದರೆ ಭಾರತದ ಯುವಕರು ಮಾತ್ರ ನಾಲ್ಕು ವರ್ಷಗಳ ನಂತರ ಅವರನ್ನು ಸೇನೆಯಿಂದ ತೊರೆಯಲು ಕೇಳಿಕೊಂಡಿರುವ ಬಗ್ಗೆ ನಮಗೆ ತಿಳಿಸಿದರು ಎಂದು ರಾಹುಲ್ ಗಾಂಧಿ ಸಂಸತ್ನಲ್ಲಿ ಪ್ರಸ್ತಾಪಿಸಿದ್ದಾರೆ.


ರಾಹುಲ್ ಗಾಂಧಿ ಸಂಸತ್ ನಲ್ಲಿ ಮಾತನಾಡುತ್ತಾ, ಅಗ್ನಿವೀರ್ ಯೋಜನೆಯನ್ನು ಸೇನೆಯ ಮೇಲೆ ಹೇರಲಾಗುತ್ತಿದೆ. ಅಲ್ಲದೆ ಜನರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ ಮತ್ತೆ ಅವರನ್ನು ಸಮಾಜಕ್ಕೆ ಹಿಂತಿರುಗಿಸಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಹಿಂಸಾಚಾರ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂಬುದನ್ನು ನಿವೃತ್ತ ಅಧಿಕಾರಿಗಳು ಹೇಳಿಕೊಂಡಿದ್ದಾರೆ.