ಹಂಪಿ ಕೃಷ್ಣ ದೇವರಾಯ ವಿ.ವಿ.ಯ ಎಸ್ ಕೆ.ಎನ್ ಜಿ ಕಾಲೇಜಿಗೆ ಐದು Rank

Prasthutha|

ಬೆಂಗಳೂರು: ಹಂಪಿ ಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ ಗಂಗಾವತಿಯ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಎಸ್. ಕೆ. ಎನ್. ಜಿ .ಪ್ರಥಮ ದರ್ಜೆ ಕಾಲೇಜಿನ ಮೂವರು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಇಬ್ಬರು ಸ್ನಾತಕ ವಿದ್ಯಾರ್ಥಿಗಳು Rank ಗಳಿಸಿ ಕಾಲೇಜಿನ ಹಿರಿಮೆ ಹೆಚ್ಚಿಸಿದ್ದಾರೆ.

- Advertisement -


2019-20 ವರ್ಷದ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಲ್ಲಿ ಸಂತೋಷ ಶೇ 73.91, ಕನ್ನಡ ವಿಭಾಗದಲ್ಲಿ ಜ್ಯೋತಿ ಶೇ 80.82, ಸಮಾಜಶಾಸ್ತ್ರ ವಿಭಾಗದಲ್ಲಿ ಕನಕರಾಯನ ಗೌಡ ಶೇ 74.23 ಅಂಕಗಳನ್ನು ಪಡೆದು ಪ್ರಥಮ Rank ಪಡೆದಿದ್ದಾರೆ.
ಪದವಿ ವಿಭಾಗದಲ್ಲಿ ಬಿ ಎಸ್ ಸಿ ವಿಭಾಗದಲ್ಲಿ ಫಾತಿಮಾ ಅರೋಸಾ ಶೇ 89.47, ಅಂಕ ಪಡೆದು ನಾಲ್ಕನೇ ಸ್ಥಾನ, ಸಯೀದ್ ಸಾದಿಯಾ ಅರಾ ಶೇ 89.4 ಅಂಕ ಪಡೆದು ಎಂಟನೇ Rakn ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಎನ್.ಜಿ.ಹೆಬಸೂರ್ ತಿಳಿಸಿದ್ದಾರೆ.


ಕಾಲೇಜಿಗೆ ಐದು Rank ಲಭಿಸಿರುವುದಕ್ಕೆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಶಾಸಕ ಪರಣ್ಣ ಮುನವಳ್ಳಿ, ಕಾರ್ಯಾಧ್ಯಕ್ಷ ಶಿವಾನಂದ ಮೇಟಿ ಹಾಗೂ ಭೂ ದಾನಿಗಳಾದ ಕೊಲ್ಲಿ ನಾಗೇಶ್ವರರಾವ್ , ಆಡಳಿತ ಮಂಡಳಿಯ ಸರ್ವಸದಸ್ಯರು,ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ರಾಂಕ್ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

Join Whatsapp