ಹರಿದ್ವಾರದಲ್ಲಿ ಪಂಚಾಯತ್ ಚುನಾವಣಾ ಅಭ್ಯರ್ಥಿ ವಿತರಿಸಿದ ಮದ್ಯ ಸೇವಿಸಿ ಐವರ ದುರ್ಮರಣ

Prasthutha|

ಉತ್ತರಖಂಡ: ಪಂಚಾಯತ್ ಚುನಾವಣಾ ಅಭ್ಯರ್ಥಿಯೊಬ್ಬರು ವಿತರಿಸಿದ ಮದ್ಯವನ್ನು ಸೇವಿಸಿ, ಎರಡು ಹಳ್ಳಿಗಳಲ್ಲಿನ ಐದು ಜನರು ಸಾವನ್ನಪ್ಪಿದ್ದು ಮತ್ತೆ ಕೆಲವರು ಆಸ್ಪತ್ರೆಗೆ ದಾಖಲಾದ ಘಟನೆ ಫೂಲ್ಘಡ್ ಮತ್ತು ಶಿವಗಢ್ ಎಂಬ ಎರಡು ಗ್ರಾಮಗಳಲ್ಲಿ ನಡೆದಿದೆ.

- Advertisement -

ಆಸ್ಪತ್ರೆಗೆ ದಾಖಲಾದವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದು ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಫೂಲ್ಗಢ್ ಗ್ರಾಮದಲ್ಲಿ ರಾಜು, ಅಮರ್ಪಾಲ್ ಮತ್ತು ಭೋಲಾ ಎಂಬ ಮೂವರು ಮತ್ತು ಶಿವಗಢ್ ಗ್ರಾಮದಲ್ಲಿ ಮನೋಜ್ ಮತ್ತು ಕಾಕಾ ಎಂಬ ಇಬ್ಬರು ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಹರಿದ್ವಾರದ ಹಿರಿಯ ಪೊಲೀಸ್ ಅಧೀಕ್ಷಕ ಯೋಗೇಂದ್ರ ಯಾದವ್ ತಿಳಿಸಿದ್ದಾರೆ. ಇನ್ನೂ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

- Advertisement -

ಮದ್ಯದ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ. ಸಾವಿಗೆ ಅತಿಯಾದ ಮದ್ಯಪಾನವೇ ಕಾರಣವೇ ಎಂಬುದನ್ನು ಸಹ ಪತ್ತೆಹಚ್ಚಲಾಗುತ್ತಿದೆ ಎಂದು ಎಸ್ಎಸ್ಪಿ ತಿಳಿಸಿದ್ದಾರೆ. ಪಂಚಾಯತ್ ಚುನಾವಣಾ ಅಭ್ಯರ್ಥಿಯೊಬ್ಬರು ಗ್ರಾಮಸ್ಥರಿಗೆ ಮದ್ಯವನ್ನು ಹಂಚಿದ್ದಾರೆ ಎಂಬ ಮಾಹಿತಿ ಇದೆ ಎಂದು ಯಾದವ್ ಹೇಳಿದರು, ಅವರನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಪತ್ರಿ ಪೊಲೀಸ್ ಠಾಣೆಯ ಎಸ್ಎಚ್ಒ ರವೀಂದ್ರ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿನಯ್ ಶಂಕರ್ ಪಾಂಡೆ ಅವರನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಕಚೇರಿಯ ವರದಿಯು ಅಕ್ರಮ ಮದ್ಯ ಸೇವನೆಯು ಈ ಪ್ರಕರಣದಲ್ಲಿ ಸಾವಿಗೆ ಕಾರಣವಲ್ಲ ಎಂದು ಪ್ರಾಥಮಿಕ ವಿಚಾರಣೆಗಳು ಸೂಚಿಸುತ್ತವೆ ಎಂದು ಹೇಳಿದೆ.

ಒಂದು ಪ್ರಕರಣದಲ್ಲಿ ವೃದ್ದಾಪ್ಯ ಮತ್ತು ಅನಾರೋಗ್ಯ, ಮತ್ತೊಂದು ಪ್ರಕರಣದಲ್ಲಿ ಇಬ್ಬರು ಜನರ ನಡುವಿನ ಜಗಳದಲ್ಲಿ ಗಾಯಗಳು ಮತ್ತು ಮೂರನೇ ಪ್ರಕರಣದಲ್ಲಿ ಅತಿಯಾದ ಮದ್ಯಪಾನದಿಂದ ಈ ಸಾವುಗಳು ಸಂಭವಿಸಿವೆ ಎಂದು ವರದಿ ತಿಳಿಸಿದೆ. ಆದಾಗ್ಯೂ, ಮರಣೋತ್ತರ ಪರೀಕ್ಷೆ ಮತ್ತು ಮ್ಯಾಜಿಸ್ಟೀರಿಯಲ್ ತನಿಖೆಯ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಪಾಂಡೆ ಹೇಳಿದರು.

ಹರಿದ್ವಾರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಪೂರಂ ಸಿಂಗ್ ರಾಣಾ ಅವರು ಈ ಬಗ್ಗೆ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸಲಿದ್ದಾರೆ. 2019 ರಲ್ಲಿ ಹರಿದ್ವಾರದ ಐದು ಹಳ್ಳಿಗಳಲ್ಲಿ ಅಕ್ರಮ ಮದ್ಯ ಸೇವಿಸಿ 40 ಜನರು ಸಾವನ್ನಪ್ಪಿದ್ದಾರೆ.

Join Whatsapp