ಉತ್ತರ ಕೊರಿಯಾ | ಸಮುದ್ರದಲ್ಲಿ ವಿದೇಶಿ ರೇಡಿಯೊ ಕೇಳಿದುದಕ್ಕೆ ಮೀನುಗಾರಿಕಾ ಬೋಟ್ ನ ಕ್ಯಾಪ್ಟನ್ ಗೆ ಸಾರ್ವಜನಿಕವಾಗಿ ಮರಣ ದಂಡನೆ

Prasthutha|

ನವದೆಹಲಿ : ನಮ್ಮಲ್ಲಿ ಒಂದಷ್ಟು ಜನ ಸರ್ವಾಧಿಕಾರ, ರಾಜಾಡಳಿತ ಇರಬೇಕಿತ್ತು ಎಂದು ಈಗಲೂ ಬಡಬಡಿಸುವವರಿದ್ದಾರೆ. ಪ್ರಜಾಪ್ರಭುತ್ವದ ಮೂಲಭೂತ ಅರ್ಥವೇ ಗೊತ್ತಿಲ್ಲದ ಇವರು ಅವಕಾಶ ಸಿಕ್ಕಾಗಲೆಲ್ಲಾ, ನಮ್ಮ ದೇಶದ ಸಂವಿಧಾನ, ಕಾನೂನನ್ನು ಹೀಯಾಳಿಸುತ್ತಿರುತ್ತಾರೆ. ಈ ಸುದ್ದಿ ಓದಿದ ಮೇಲಾದರೂ, ನಮ್ಮ ಸಂವಿಧಾನ, ಕಾನೂನು ವ್ಯವಸ್ಥೆ ಎಷ್ಟು ಶ್ರೇಷ್ಠವಾದುದು ಎಂಬುದು ಅರ್ಥವಾಗಬಹುದು.

ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿದ್ದ ವೇಳೇ ನಿಷೇಧಿತ ವಿದೇಶಿ ರೇಡಿಯೊ ಸ್ಟೇಶನ್ ನ ಕಾರ್ಯಕ್ರಮ ಕೇಳಿದರೆಂಬ ಆರೋಪದಲ್ಲಿ ಉತ್ತರ ಕೊರಿಯಾದ ಮೀನುಗಾರಿಕಾ ಬೋಟ್ ನ ಕ್ಯಾಪ್ಟನ್ ಒಬ್ಬರಿಗೆ ಸಾರ್ವಜನಿಕವಾಗಿ ಮರಣ ದಂಡನೆ ನೀಡಿದ ಘಟನೆ ವರದಿಯಾಗಿದೆ.

- Advertisement -

ವಿದೇಶಿ ರೇಡಿಯೊ ಸ್ಟೇಶನ್ ಕೇಳಿದುದಾಗಿ ಒಪ್ಪಿಕೊಂಡ 40ರ ಹರೆಯದ ಮೀನುಗಾರನ ಮೇಲೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತದ ಅಧಿಕಾರಿಗಳು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಕೆಲವು ಸಮಯದಿಂದ ಫ್ರೀ ಏಷ್ಯಾ ರೇಡಿಯೊ ಸ್ಟೇಶನ್ ಕೇಳಿದುದಕ್ಕೆ ಚೊಂಗ್ ಜಿನ್ ನ ಮೀನುಗಾರಿಕಾ ಬೋಟ್ ನ ಕ್ಯಾಪ್ಟನ್ ಗೆ 100 ಮಂದಿಯ ಸಮ್ಮುಖದಲ್ಲಿ ಈ ಶಿಕ್ಷೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. ಮೃತ ಮೀನುಗಾರಿಕಾ ಬೋಟ್ ನ ಮಾಲೀಕ 50 ಬೋಟ್ ಗಳ ಮಾಲಿಕತ್ವ ಹೊಂದಿದ್ದನು ಎನ್ನಲಾಗಿದೆ.       

- Advertisement -