‘ಲವ್ ಜಿಹಾದ್’ ಕುಖ್ಯಾತಿಯ ಮತಾಂತರ ತಡೆ ಕಾಯ್ದೆಯಡಿ ಉತ್ತರ ಪ್ರದೇಶದಲ್ಲಿ ಇನ್ನೊಬ್ಬನ ಬಂಧನ

Prasthutha|

ಶಾಜಹಾನ್ ಪುರ : ಉತ್ತರ ಪ್ರದೇಶದ ನೂತನ ಮತಾಂತರ ತಡೆ ಕಾನೂನಿನಡಿ ದಾಖಲಾದ ಎರಡು ಆರಂಭಿಕ ಪ್ರಕರಣಗಳಲ್ಲಿ ಬಿಜೆಪಿ ಆಡಳಿತದ ಸರಕಾರಕ್ಕೆ ದೊಡ್ಡ ಮುಖಭಂಗವಾಗಿದ್ದರೂ, ಇದೀಗ ಶಾಜಹಾನ್ ಪುರದಲ್ಲಿ ಮತ್ತೋರ್ವ ವ್ಯಕ್ತಿಯನ್ನು ಇದೇ ಕಾನೂನಿನಲ್ಲಿ ಬಂಧಿಸಲಾಗಿದೆ. ‘ಲವ್ ಜಿಹಾದ್’ ಕುಖ್ಯಾತಿಯ ನೂತನ ಬಲವಂತದ ಮತಾಂತರ ತಡೆ ಕಾನೂನಿನಡಿ 12 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.

45ರ ಹರೆಯದ ಮಹಿಳೆಯನ್ನು ಬಲವಂತವಾಗಿ ಮತಾಂತರಕ್ಕೆ ಯತ್ನಿಸಲಾಗಿದೆ, ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಬಿಜೆಪಿ ಬೆಂಬಲಿಗ ಸಂಘಟನೆ ವಿಶ್ವ ಹಿಂದೂ ಪರಿಷತ್ ನ ಪದಾಧಿಕಾರಿ ರಾಜೇಶ್ ಅಶ್ವಥಿ ಎಂಬಾತನ ನೇತೃತ್ವದಲ್ಲಿ ದೂರು ನೀಡಲಾಗಿದೆ.

- Advertisement -

ಬಂಧಿತ ಆರೋಪಿ ಮುಹಮ್ಮದ್ ಸಯೀದ್ ಎಂದು ಗುರುತಿಸಲಾಗಿದೆ. ಮದುವೆ ನಿರ್ವಹಿಸಲು ಯತ್ನಿಸಿದ ಖಾಝಿ ಸಹಿತ 12 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಲ್ಲರ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.        

- Advertisement -