ಚುನಾವಣೆ ಹೊತ್ತಿಗೆ ನೀವು ಏಕಾಂಗಿಯಾಗಿರುತ್ತೀರಿ : ಮಮತಾ ಬ್ಯಾನರ್ಜಿಗೆ ಅಮಿತ್ ಶಾ ಸವಾಲು

Prasthutha|

ಕೊಲ್ಕತಾ : ಇಂದು ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ನಡೆದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಟಿಎಂಸಿ ತೊರೆದು ಬಂದ ಮಾಜಿ ಸಚಿವ ಸುವೇಂದು ಅಧಿಕಾರಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಈ ವೇಳೆ ಅವರು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

- Advertisement -

ಯಾಕೆ ತುಂಬಾ ಜನ ಟಿಎಂಸಿ ತೊರೆಯುತ್ತಿದ್ದಾರೆ? ಯಾಕೆಂದರೆ, ಮಮತಾ ಬ್ಯಾನರ್ಜಿಯವರ ದುರಾಡಳಿ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತವೇ ಕಾರಣ. ದೀದಿ (ಮಮತಾ ಬ್ಯಾನರ್ಜಿ) ಇದು ಆರಂಭ ಮಾತ್ರ, ಚುನಾವಣೆ ಬರುವ ಹೊತ್ತಿಗೆ ನೀವು ಏಕಾಂಗಿಯಾಗಿ ಉಳಿಯಲಿದ್ದೀರಿ ಎಂದು ಅಮಿತ್ ಶಾ ಹೇಳಿದ್ದಾರೆ.

ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸಕ್ಕೆ ತೆರಳಿರುವ ಅಮಿತ್ ಶಾ ಇಂದು ಮೊದಲು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದ್ದರು. ಮೇದಿನಿಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಖುದಿರಾಮ್ ಬೋಸ್ ಅವರ ಪೂರ್ವಜರ ಸ್ಥಳಕ್ಕೆ ಅವರು ಭೇಟಿ ನೀಡಿದರು. ರೈತರೊಬ್ಬರ ಮನೆಯಲ್ಲಿ ಔತಣ ಮಾಡುವ ಮೂಲಕವೂ ಗಮನ ಸೆಳೆದರು.

- Advertisement -

ಸುವೇಂದು ಅಧಿಕಾರಿ ಅವರ ಟಿಎಂಸಿಗೆ ರಾಜೀನಾಮೆ ನೀಡಿ, ಇಂದು ಬಿಜೆಪಿ ಸೇರುವುದು ಪೂರ್ವ ನಿರ್ಧರಿತವಾಗಿತ್ತು. ಇವರ ಜೊತೆಗೆ ಸಾಕಷ್ಟು ಹಲವಾರು ಟಿಎಂಸಿ ಪ್ರಮುಖರು, ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.    

Join Whatsapp