ನವದೆಹಲಿ : ನಮ್ಮಲ್ಲಿ ಒಂದಷ್ಟು ಜನ ಸರ್ವಾಧಿಕಾರ, ರಾಜಾಡಳಿತ ಇರಬೇಕಿತ್ತು ಎಂದು ಈಗಲೂ ಬಡಬಡಿಸುವವರಿದ್ದಾರೆ. ಪ್ರಜಾಪ್ರಭುತ್ವದ ಮೂಲಭೂತ ಅರ್ಥವೇ ಗೊತ್ತಿಲ್ಲದ ಇವರು ಅವಕಾಶ ಸಿಕ್ಕಾಗಲೆಲ್ಲಾ, ನಮ್ಮ ದೇಶದ ಸಂವಿಧಾನ, ಕಾನೂನನ್ನು ಹೀಯಾಳಿಸುತ್ತಿರುತ್ತಾರೆ. ಈ ಸುದ್ದಿ ಓದಿದ ಮೇಲಾದರೂ, ನಮ್ಮ ಸಂವಿಧಾನ, ಕಾನೂನು ವ್ಯವಸ್ಥೆ ಎಷ್ಟು ಶ್ರೇಷ್ಠವಾದುದು ಎಂಬುದು ಅರ್ಥವಾಗಬಹುದು.
ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿದ್ದ ವೇಳೇ ನಿಷೇಧಿತ ವಿದೇಶಿ ರೇಡಿಯೊ ಸ್ಟೇಶನ್ ನ ಕಾರ್ಯಕ್ರಮ ಕೇಳಿದರೆಂಬ ಆರೋಪದಲ್ಲಿ ಉತ್ತರ ಕೊರಿಯಾದ ಮೀನುಗಾರಿಕಾ ಬೋಟ್ ನ ಕ್ಯಾಪ್ಟನ್ ಒಬ್ಬರಿಗೆ ಸಾರ್ವಜನಿಕವಾಗಿ ಮರಣ ದಂಡನೆ ನೀಡಿದ ಘಟನೆ ವರದಿಯಾಗಿದೆ.
ವಿದೇಶಿ ರೇಡಿಯೊ ಸ್ಟೇಶನ್ ಕೇಳಿದುದಾಗಿ ಒಪ್ಪಿಕೊಂಡ 40ರ ಹರೆಯದ ಮೀನುಗಾರನ ಮೇಲೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತದ ಅಧಿಕಾರಿಗಳು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಕೆಲವು ಸಮಯದಿಂದ ಫ್ರೀ ಏಷ್ಯಾ ರೇಡಿಯೊ ಸ್ಟೇಶನ್ ಕೇಳಿದುದಕ್ಕೆ ಚೊಂಗ್ ಜಿನ್ ನ ಮೀನುಗಾರಿಕಾ ಬೋಟ್ ನ ಕ್ಯಾಪ್ಟನ್ ಗೆ 100 ಮಂದಿಯ ಸಮ್ಮುಖದಲ್ಲಿ ಈ ಶಿಕ್ಷೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. ಮೃತ ಮೀನುಗಾರಿಕಾ ಬೋಟ್ ನ ಮಾಲೀಕ 50 ಬೋಟ್ ಗಳ ಮಾಲಿಕತ್ವ ಹೊಂದಿದ್ದನು ಎನ್ನಲಾಗಿದೆ.