ಮತಾಂತರ ತಡೆಗೆ ಉತ್ತರ ಪ್ರದೇಶದ ರೀತಿಯಲ್ಲಿ ರಾಜ್ಯದಲ್ಲಿ ಕಾನೂನು ತನ್ನಿ: ಬೋಪಯ್ಯ ಆಗ್ರಹ

Prasthutha|

ಬೆಂಗಳೂರು: ಮತಾಂತರ ತಡೆಗೆ ಕಡಿವಾಣ ಹಾಕಬೇಕೆಂದರೆ ಉತ್ತರ ಪ್ರದೇಶದ ರೀತಿಯಲ್ಲಿ ರಾಜ್ಯದಲ್ಲೂ ಕಾನೂನು ತರಬೇಕಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ವಿಧಾನಸಭೆಯಲ್ಲಿಂದು ಒತ್ತಾಯಿಸಿದ್ದಾರೆ.


ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಗೂಳಿಹಟ್ಟಿ ಶೇಖರ್, ಚಿತ್ರದುರ್ಗದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಮತಾಂತರವಾಗಿದ್ದಾರೆ. ನನ್ನ ಹೆತ್ತ ತಾಯಿಯನ್ನೂ ಮತಾಂತರ ಮಾಡಿದ್ದಾರೆ ಎಂದು ಹೇಳಿದರು. ಕೆಲವು ಚರ್ಚ್ ಗಳಲ್ಲಿ ಬ್ರೈನ್ ವಾಶ್ ಮಾಡುತ್ತಿದ್ದಾರೆ, ತಾಯಿಗೂ ಬ್ರೈನ್ ವಾಶ್ ಮಾಡಿದ್ದಾರೆ ಎಂದು ದೂರಿದರು.

- Advertisement -


ದಲಿತರು, ಹಿಂದುಳಿದ ವರ್ಗದವರನ್ನು ಜಾಸ್ತಿ ಮತಾಂತರ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಪಿಡುಗು. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.


ಈ ಬಗ್ಗೆ ಸದನದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಒತ್ತಾಯಪೂರ್ವಕವಾಗಿ ಮತಾಂತರ ಕಾನೂನುಬಾಹಿರ ಆಗಿದೆ. ಹಾಗಾಗಿ, ಬೇರೆ ಬೇರೆ ರಾಜ್ಯಗಳ ಕಾಯ್ದೆಯನ್ನು ಪರಿಶೀಲನೆ ಮಾಡಿ ರಾಜ್ಯದಲ್ಲೂ ಕಾಯ್ದೆ ಜಾರಿ ಮಾಡುವ ಬಗ್ಗೆ ಚರ್ಚಿಸ್ತೇವೆ ಎಂದು ತಿಳಿಸಿದ್ದಾರೆ.

- Advertisement -