ಕೆ ಆರ್ ಪೇಟೆ| ವಿದ್ಯುತ್ ಸ್ಪರ್ಶಕ್ಕೆ ಸುಟ್ಟು ಕರಕಲಾದ ಶ್ರೀಕಾಲಭೈರವೇಶ್ವರ ಸಮುದಾಯ ಭವನದ ಸಾಮಗ್ರಿಗಳು

Prasthutha|

ಕೆ ಆರ್ ಪೇಟೆ: ಆಕಸ್ಮಿಕ ವಿದ್ಯುತ್ ಸ್ಪರ್ಶಕ್ಕೆ ಶ್ರೀಕಾಲಭೈರವೇಶ್ವರ ಸಮುದಾಯ ಭವನದ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ನಡೆದಿದೆ. ಸುಮಾರು ಎರಡು ತಿಂಗಳಿಗೂ ಹೆಚ್ಚು ಲಾಕ್ ಡೌನ್ನಿಂದ ಶುಭ ಸಮಾರಂಭಗಳು ಇಲ್ಲದೆ ಸಂಕಷ್ಟದ ಸಮಯದಲ್ಲಿರುವ ವೇಳೆ ಆಕಸ್ಮಿಕ ಶಾರ್ಟ್ ಸರ್ಕ್ಯೂಟ್ನಿಂದ ಸಾಮಾಗ್ರಿಗಳು ಸುಟ್ಟು ಕರಕಲಾಗಿರುವುದು ಸುಟ್ಟಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ ಎಂದು ಸಮುದಾಯ ಭವನದ ಮಾಲೀಕ ಬಿರವಳ್ಳಿ ಯೋಗೇಶ್ ಗೌಡ ರವರು ಅಳಲು ತೋಡಿಕೊಂಡಿದ್ದಾರೆ.

- Advertisement -

ಕೆ ಆರ್ ಪೇಟೆ ತಾಲೂಕಿನ ಶ್ರೀ ಚೆಂದಗೋಳಮ್ಮ ದೇವಸ್ಥಾನದ ಬಳಿ ಬೀರವಳ್ಳಿ ಗ್ರಾಮದ ಯೋಗೇಶ್ ಗೌಡ ಎಂಬುವರಿಗೆ ಸೇರಿದ ಶ್ರೀ ಕಾಲಭೈರವೇಶ್ವರ ಸಮುದಾಯ ಭವನ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಅವಘಡದಿಂದ ಎರಡು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಸಮುದಾಯ ಭವನಕ್ಕೆ ಸೇರಿದ ಅಡುಗೆ ಪಾತ್ರೆ. ಶಾಮಿಯಾನ. ಯುಪಿಎಸ್. ಕಾರರುಬ್ಬುವ ಯಂತ್ರ. ಅಡುಗೆವಲೇ. ಸೇರಿದಂತೆ ಇನ್ನಿತರ ಉಪಕರಣಗಳು ಸುಟ್ಟು ಕರಕಲಾಗಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ನಿಂಗೇಗೌಡ ರವರು ಹೆಮ್ಮಾರಿ ಕೋರೋನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ಎರಡು ತಿಂಗಳಿಗೂ ಹೆಚ್ಚು ಲಾಕ್ಡೌನ್ ಆದೇಶದ ಹಿನ್ನೆಲೆಯಲ್ಲಿ ಯಾವುದೇ ಶುಭಸಮಾರಂಭಗಳು ನಡೆಯದೆ ಸಂಕಷ್ಟಕ್ಕೆ ಸಿಲುಕಿರುವ ಸಮಯದಲ್ಲೆ ಇಂತಹ ದುರ್ಘಟನೆ ನಡೆದಿರುವುದು ಬೇಸರದ ಸಂಗತಿ, ಸಂಬಂಧಪಟ್ಟ ಅಧಿಕಾರಿಗಳು ಈ ಘಟನೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಘಟನೆಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

- Advertisement -

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮತ್ತು ಕೆಇಬಿ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಮುದಾಯ ಭವನದ ಮಾಲೀಕರಾದ ಯೋಗೇಶ್ ಗೌಡ. ಬೀರುವಳ್ಳಿ ನವೀನ್ ಕುಮಾರ್. ಸೇರಿದಂತೆ ಉಪಸ್ಥಿತರಿದ್ದರು.

ವರದಿ : ಮನು ಮಾ, ಕೆ ಆರ್ ಪೇಟೆ



Join Whatsapp