ಮಗುವಿನ ಜೀವ ಉಳಿಸಲು ಒಂದಾದ ಹೃದಯಗಳು; ಚಿಕಿತ್ಸೆಗಾಗಿ 18 ಕೋಟಿ ಸಂಗ್ರಹ

Prasthutha|

ಬಿಕ್ಕಟ್ಟಿನ ನಡುವೆಯೂ ಒಂದೂವರೆ ವರ್ಷದ ಮುಹಮ್ಮದ್ ಎಂಬ ಒಂದೂವರೆ ವರ್ಷದ ಮಗುವಿನ ಪ್ರಾಣ ಉಳಿಸಲು ಹೃದಯವಂತ ಜನತೆ ಒಗ್ಗೂಡಿದಾಗ ಚಿಕಿತ್ಸೆಗಾಗಿ ಕೇವಲ ಏಳು ದಿನಗಳಲ್ಲಿ ಬರೋಬ್ಬರಿ 18 ಕೋಟಿ ರೂ. ಹರಿದು ಬಂದಿದೆ.
ಮಗುವಿನ ಚಿಕಿತ್ಸೆಗಾಗಿ ಮಿಡಿದ ಹೃದಯಗಳಿಗೆ ಧನ್ಯವಾದ ಅರ್ಪಿಸಿದ ಕುಟುಂಬ ಇನ್ನು ಯಾರೂ ಹಣ ಕಳುಹಿಸಬೇಕಾಗಿಲ್ಲ ಎಂದು ತಿಳಿಸಿ, ಅಕೌಂಟ್ ಕ್ಲೋಸ್ ಮಾಡಿದೆ

- Advertisement -


ಸ್ಪೆನಲ್ ಮಸ್ಕ್ಯುಲರ್ ಅಟ್ರೋಫಿ ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಕೇರಳದ ಕಣ್ಣೂರಿನ ಮಾಟೂಲ್‌ ಮೂಲದ ಒಂದೂವರೆ ವರ್ಷದ ಮಗು ಮುಹಮ್ಮದ್‌ ನ ಚಿಕಿತ್ಸೆಗಾಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು. ಈ ಕಾಯಿಲೆಗೆ ಚಿಕಿತ್ಸೆಗಾಗಿ ನೀಡುವ ಒಂದು ಡೋಸ್ ಲಸಿಕೆಯ ಬೆಲೆ ಬರೋಬ್ಬರಿ 18 ಕೋಟಿ! ಇದು ವಿಶ್ವದ ಅತ್ಯಂತ ದುಬಾರಿ ಔಷಧಿ ಎನ್ನಲಾಗಿದೆ.


ಕೇರಳದ ಕಣ್ಣೂರಿನ ಮಾಟೂಲ್ ಮೂಲದ ರಫೀಕ್-ಮರಿಯಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಅಫ್ರಾ ಹಿರಿಯವಳು. ಹದಿನೈದು ವರ್ಷದ ಅಫ್ರಾ ಕೂಡ ಇದೇ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ನಡುವೆ ಅಫ್ರಾಳ ಕಿರಿಯ ಸಹೋದರ ಮುಹಮ್ಮದ್ ನಿಗೂ ಸ್ಪೆನಲ್ ಮಸ್ಕ್ಯುಲರ್ ಅಟ್ರೋಫಿ ಖಾಯಿಲೆ ದೃಢಪಟ್ಟಿದೆ.

- Advertisement -


ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಕುಟುಂಬದ ಪರಿಸ್ಥಿತಿ ತಿಳಿದು ಸಾಮಾಜಿಕ ಜಾಲತಾಣದಲ್ಲಿ ಧನಸಹಾಯ ಮಾಡುವಂತೆ ವಿನಂತಿಸಿದ್ದರು. ಇದಕ್ಕೂ ಮೊದಲು ಮಗುವಿನ ಸಹೋದರಿ ಕೂಡ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದರು. ಭಾರತ, ಗಲ್ಫ್ ದೇಶಗಳು ಸೇರಿದಂತೆ ಜಗತ್ತಿನ ವಿವಿಧ ಮೂಲಗಳಿಂದ ದೇಣಿಗೆ ಹರಿದುಬಂದಿದೆ.
ಮಗುವಿಗೆ ಎರಡು ವರ್ಷ ತುಂಬಲು ಇನ್ನು ಕೇವಲ ನಾಲ್ಕು ತಿಂಗಳು ಬಾಕಿ ಇದ್ದು, ಇದರೊಳಗೆ ಒಂದು ಲಸಿಕೆ ಹಾಕಿದರೆ ಮಗು ಬದುಕುಳಿಯಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ವಿದೇಶದಿಂದ ಲಸಿಕೆ ತರುವ ಪ್ರಕ್ರಿಯೆ ಆರಂಭಗೊಂಡಿದೆ. ಶೀಘ್ರವೇ ಕೇರಳಕ್ಕೆ ಲಸಿಕೆ ಬರುವ ನಿರೀಕ್ಷೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Join Whatsapp