ಮಂಗಳೂರು: ಹೃದಯಾಘಾತದಿಂದ ಯೋಧ ಮೃತ್ಯು

Prasthutha|

- Advertisement -

ಮಂಗಳೂರು: ಬಿಎಸ್‌ ಎಫ್ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕುಲಶೇಖರ ಉಮಿಕಾನ ನಿವಾಸಿ, ಬಿಎಸ್‌ ಎಫ್ ಯೋಧ ಹರೀಶ್ ಕುಮಾರ್ (43) ಮೃತರು ಎಂದು ತಿಳಿದು ಬಂದಿದೆ.

- Advertisement -

ಹರೀಶ್ ಕುಮಾರ್ ಅವರು ಕಳೆದ 21 ವರ್ಷಗಳಿಂದ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆಗಾಗಿ ಊರಿಗೆ ಬಂದಿದ್ದ ಅವರಿಗೆ ಶನಿವಾರ ಹೃದಯಾಘಾತವಾಗಿದೆ. ಬಳಿಕ‌ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಇಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp