FMCG ಬ್ರ್ಯಾಂಡ್ ರ‍್ಯಾಂಕಿಂಗ್​ನಲ್ಲಿ ಮೇಲೇರಿದ ನಂದಿನಿ, ಒಂದು ಸ್ಥಾನ ಕುಸಿದ ಅಮುಲ್

Prasthutha|

ಬೆಂಗಳೂರು: ಫಾಸ್ಟ್ ಮೂವಿಂಗ್ ಕನ್​ಸ್ಯೂಮರ್ ಗೂಡ್ಸ್ (FMCG) ಬ್ರ್ಯಾಂಡ್ ರ‍್ಯಾಂಕಿಂಗ್​ನಲ್ಲಿ 2023ನೇ ಸಾಲಿನಲ್ಲಿ ಕರ್ನಾಟಕ ಸಹಕಾರಿ ಹಾಲು ಮಾರಾಟ ಮಹಾಮಂಡಳಿಯ (KMF) ಡೈರಿ ಬ್ರ್ಯಾಂಡ್ ನಂದಿನಿ ಒಂದು ಸ್ಥಾನ ಮೇಲಕ್ಕೇರಿದೆ.

- Advertisement -

2022ರಲ್ಲಿ 7ನೇ ಸ್ಥಾನದಲ್ಲಿದ್ದ ನಂದಿನಿ ಬ್ರ್ಯಾಂಡ್ 2023ರಲ್ಲಿ ಒಂದು ಸ್ಥಾನ ಮೇಲೇರಿ 6ರಲ್ಲಿ ಗುರುತಿಸಿಕೊಂಡಿದೆ. ಮತ್ತೊಂದೆಡೆ, 2022 ರಲ್ಲಿ 2ನೇ ಸ್ಥಾನದಲ್ಲಿದ್ದ ಗುಜರಾತ್​​ನ ಅಮುಲ್ 3 ನೇ ಸ್ಥಾನಕ್ಕೆ ಕುಸಿದಿದೆ.

ಬ್ರ್ಯಾಂಡ್ ಫುಟ್‌ಪ್ರಿಂಟ್ ಎಂಬ ಬ್ರ್ಯಾಂಡ್ ರ‍್ಯಾಂಕಿಂಗ್ ಪಟ್ಟಿಯನ್ನು ಲಂಡನ್ ಮೂಲದ ಮಾರುಕಟ್ಟೆ ಸಂಶೋಧನಾ ಗುಂಪಿನ ಕಾಂತಾರ್ ವರ್ಲ್ಡ್‌ಪ್ಯಾನೆಲ್ ಪ್ರಕಟಿಸಿದೆ.

- Advertisement -

2023 ರ ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಗುಜರಾತ್​ನ ಅಮುಲ್ ಬ್ರ್ಯಾಂಡ್​​ನ ಹಾಲು ರಾಜ್ಯದ ಮಾರುಕಟ್ಟೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದೆ ಎಂಬ ವಿಚಾರ ಭಾರಿ ಗದ್ದಲಕ್ಕೆ ಕಾರಣವಾಗಿತ್ತು. ಅಮುಲ್ ವಿರುದ್ಧ ಭಾರಿ ಪ್ರತಿಭಟನೆಗಳೂ ನಡೆದಿದ್ದವು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಈ ಬ್ರ್ಯಾಂಡ್ ರ‍್ಯಾಂಕಿಂಗ್ ಕೆಎಂಎಫ್​ಗೆ ನಿರಾಳತೆ ಒದಗಿಸಲಿದೆ ಎನ್ನಲಾಗಿದೆ.

ಈ ಮಧ್ಯೆ, ಕರ್ನಾಟಕದ ಹೈನುಗಾರರ ಶ್ರಮಕ್ಕೆ ಉತ್ತಮ ಆದಾಯ ಖಾತರಿಪಡಿಸಿಕೊಳ್ಳುವ ದೃಷ್ಟಿಯಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಆಗಸ್ಟ್ 1 ರಿಂದ ಕೆಎಂಎಫ್ ಮಾರಾಟ ಮಾಡುವ ಹಾಲಿನ ಬೆಲೆಯನ್ನು ಲೀಟರ್‌ಗೆ 3 ರೂ. ಹೆಚ್ಚಿಸಲು ನಿರ್ಧರಿಸಿದೆ.

Join Whatsapp